ಸೇನೆಗೆ ಜನವರಿ 10ರ ಒಳಗೆ ಸ್ನೈಪರ್ ರೈಫಲ್: ಬಿಪಿನ್ ರಾವತ್

Update: 2019-01-10 17:02 GMT

ಹೊಸದಿಲ್ಲಿ, ಜ. 10: ರಕ್ಷಣಾ ಪಡೆಯ ಉತ್ತರ ಕಮಾಂಡ್ ಜನವರಿ 10ರ ಒಳಗೆ ನೂತನ ಸ್ನೈಫರ್ ರೈಫಲ್‌ಗಳನ್ನು ಹೊಂದಲಿದೆ ಎಂದು ಭಾರತೀಯ ಸೇನೆಯ ಚೀಫ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದೇಶದಂತೆ ಕ್ಷಿಪಣಿ ಹಾಗೂ ರಾಕೆಟ್‌ಗಳನ್ನು ಪೂರೈಸಲು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ ನೀಡಲಾದ ಅಂತಿಮ ಗಡುವು 2019 ಫೆಬ್ರವರಿ ಅಥವಾ ಮಾರ್ಚ್ ಎಂದಿದ್ದಾರೆ. ಆದೇಶಿಸಲಾದ ರಾಕೆಟ್ ಹಾಗೂ ಕ್ಷಿಪಣಿಯನ್ನು ಪೂರೈಸಲು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ನಮಗೆ ಫೆಬ್ರವರಿ ಅಥವಾ ಮಾರ್ಚ್ ಅಂತಿಮ ಗಡು ನೀಡಿದೆ. ಈ ಗಡುವಿನಲ್ಲಿ ಅದು ಪೂರೈಸದೇ ಇದ್ದರೆ, ಅನಂತರ ನಾವು ಆಮದು ಮಾಡಿಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಹಾಗೂ ಚೀನಾ ಗಡಿಯ ಪರಿಸ್ಥಿತಿಯನ್ನು ಸೇನೆ ನಿಭಾಯಿಸಿದೆ ಹಾಗೂ ಈ ಬಗ್ಗೆ ಕಳವಳಪಡಬೇಕಿಲ್ಲ ಎಂದು ಅವರು ಹೇಳಿದ್ದಾರೆ. ‘‘ಜಮ್ಮು ಹಾಗೂ ಕಾಶ್ಮೀರದ ಶಾಂತಿ ಸ್ಥಾಪಿಸಲು ನಾವು ಮಾತ್ರ ಸಂಧಾನಕಾರರು. ಉತ್ತರ ಹಾಗೂ ಪಶ್ಚಿಮ ಗಡಿಯಲ್ಲಿ ಪರಿಸ್ಥಿತಿಯನ್ನು ನಾವು ನಿಭಾಯಿಸಿದ್ದೇವೆ. ಕಳವಳಪಡಬೇಕಿಲ್ಲ’’ ಎಂದರು. ಹಲವು ದೇಶಗಳು ತಾಲಿಬಾನ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಭಾರತಕ್ಕೆ ಅಫ್ಘಾನಿಸ್ಥಾನದ ಬಗ್ಗೆ ಆಸಕ್ತಿ ಇದ್ದರೆ ಭಾರತ ಕೂಡ ಅವರೊಂದಿಗೆ ಸೇರಬೇಕು ಎಂದರು.

ಇದೇ ಮಾದರಿಯನ್ನು ಜಮ್ಮು ಹಾಗೂ ಕಾಶ್ಮೀರದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಇಲ್ಲಿ ನಮ್ಮ ರೀತಿಯಲ್ಲಿ ಮಾತುಕತೆ ನಡೆಸಬೇಕು ಎಂದು ಅವರು ಹೇಳಿದರು. ನಮ್ಮ ವಿರೋಧ ಸ್ಪಷ್ಟ. ಬಂದೂಕು ಕೆಳಗಿರಿಸಿ. ಪಶ್ಚಿಮದ ನೆರೆಯ ದೇಶದ ಬೆಂಬಲವನ್ನು ನಿಲ್ಲಿಸಿ. ಹಿಂಸಾಚಾರವನ್ನು ತ್ಯಜಿಸಿದರೆ ಮಾತ್ರ ಮಾತುಕತೆ ನಡೆಸಲು ಸಾಧ್ಯ ಎಂದು ಬಿಪಿನ್ ರಾವತ್ ಹುರಿಯತ್ ನಾಯಕರನ್ನು ಉದ್ದೇಶಿಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News