ಅಲೋಕ್ ವರ್ಮಾ ರನ್ನು ವಜಾಗೊಳಿಸಲು ರಫೇಲ್ ಕಾರಣ: ರಾಹುಲ್ ಗಾಂಧಿ
Update: 2019-01-10 22:37 IST
ಹೊಸದಿಲ್ಲಿ, ಜ. 10: ರಫೇಲ್ ಒಪ್ಪಂದದ ಕಾರಣಕ್ಕಾಗಿ ಸಿಬಿಐ ವರಿಷ್ಠ ಅಲೋಕ್ ವರ್ಮಾ ಅವರನ್ನು ತುರ್ತಾಗೆ ವಜಾಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಲೋಕ್ ವರ್ಮಾ ರಜೆಯಲ್ಲಿ ತೆರಳುವಂತೆ ಕೇಂದ್ರ ಸರಕಾರ ಕಳೆದ ಅಕ್ಟೋಬರ್‌ನಲ್ಲಿ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಎರಡು ದಿನಗಳ ಬಳಿಕ ರಾಹುಲ್ ಗಾಂಧಿ ಈ ವಾಗ್ದಾಳಿ ನಡೆಸಿದ್ದಾರೆ. ಸಿಬಿಐ ವರಿಷ್ಠ ಅಲೋಕ್ ವರ್ಮಾ ಅವರನ್ನು ತುರ್ತಾಗಿ ವಜಾಗೊಳಿಸಲು ಪ್ರಧಾನಿ ಮೋದಿ ಯಾಕೆ ಪ್ರಯತ್ನಿಸುತ್ತಿದ್ದಾರೆ ?ಆಯ್ಕೆ ಸಮಿತಿ ಮುಂದೆ ಪ್ರಕರಣವನ್ನು ಅಲೋಕ್ ವರ್ಮಾ ಪ್ರಸ್ತುತಪಡಿಸಲು ಯಾಕೆ ಅವಕಾಶ ನೀಡುತ್ತಿಲ್ಲ ?ಉತ್ತರ: ರಫೇಲ್ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.