ಐಎಎಸ್ ಅಧಿಕಾರಿ ಶಾ ಫೈಝಲ್‌ಗೆ ಸೆಲ್ಯೂಟ್: ಚಿದಂಬರಂ

Update: 2019-01-10 17:23 GMT

ಹೊಸದಿಲ್ಲಿ, ಜ. 10: ಜಮ್ಮು ಕಾಶ್ಮೀರದಲ್ಲಿ ಐಎಎಸ್ ಅಧಿಕಾರಿ ಶಾ ಫೈಝಲ್ ರಾಜೀನಾಮೆ ನೀಡಿರುವ ಕುರಿತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ,

‘‘ಅವರ ದುಃಖ ಹಾಗೂ ಪ್ರತಿಭಟನೆ’’ಯನ್ನು ಇಡೀ ಜಗತ್ತು ಗಮನಿಸಲಿದೆ ಎಂದಿದ್ದಾರೆ. ನರೇಂದ್ರ ಮೋದಿ ಸರಕಾರ ತನ್ನ ಮೇಲೆ ಆರೋಪ ಹೊರಿಸಿರುವುದಾಗಿ ಕಾಶ್ಮೀರದ ಮೊದಲ ಐಎಎಸ್ ಟಾಪರ್ ಫೈಝಲ್ ಹೇಳಿರುವುದಾಗಿ ಚಿದಂಬರಂ ಸರಣಿ ಟ್ವೀಟ್‌ನಲ್ಲಿ ಪ್ರತಿಪಾದಿಸಿದ್ದಾರೆ. ‘‘ವಿಷಾದದ ವಿಚಾರ. ನಾನು ಶಾ ಫೈಝಲ್‌ಗೆ ಸೆಲ್ಯೂಟ್ ಮಾಡುತ್ತೇನೆ. ಅವರ ಹೇಳಿಕೆಯ ಪ್ರತಿ ಪದ ಸತ್ಯವಾದುದು. ಅವರು ಬಿಜೆಪಿ ಸರಕಾರದ ಆರೋಪಕ್ಕೆ ಒಳಗಾಗಿದ್ದಾರೆ. ಅವರ ದುಃಖ ಹಾಗೂ ಪ್ರತಿಭಟನೆಯನ್ನು ಜಗತ್ತು ಗಮನಿಸಲಿದೆ’’ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಪಂಜಾಬ್‌ನ ಮಾಜಿ ಡಿಜಿಪಿ ಹಾಗೂ ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಜೂಲಿಯೊ ರಿಬೈರೊ ಇದೇ ರೀತಿಯ ಹೇಳಿಕೆ ನೀಡಿದ್ದರು. ಆದರೆ, ಆಡಳಿತಗಾರರು ಅವರ ಹೇಳಿಕೆಗೆ ಒಂದು ಪದದ ಪ್ರತಿಕ್ರಿಯೆಯನ್ನು ಕೂಡ ನೀಡಿರಲಿಲ್ಲ ಎಂದು ಪಿ. ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News