ಕೊಣಾಜೆ: ವಿಜಯಾ ಬ್ಯಾಂಕ್ ಮುಂಭಾಗದಲ್ಲಿ ಕಾಂಗ್ರೆಸ್ ಧರಣಿ

Update: 2019-01-10 17:36 GMT

ಕೊಣಾಜೆ,ಜ.10: ಬಿಜೆಪಿ ಮುಖಂಡರೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ದೇಶದ ಸಮಸ್ಯೆ ಬಗೆ ಹರಿಸಬೇಕಿದ್ದ ಪ್ರಧಾನಿ ವಿದೇಶ ಸುತ್ತಿ ಖಜಾನೆ ಖಾಲಿ ಮಾಡಿದ್ದಾರೆ. ಇದರ ನಡುವೆ ಆರ್ಥಿಕವಾಗಿ ಸದೃಢವಾಗಿ ಕಾರ್ಯಾಚರಿಸುತ್ತಿರುವ ನಮ್ಮ ಜಿಲ್ಲೆಯ ಹೆಮ್ಮೆಯ ವಿಜಯಾ ಬ್ಯಾಂಕನ್ನು ಬರೋಡ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುತ್ತಿರುವುದು ನಾಚಿಗೆಗೇಡಿನ ವಿಷಯ. ಯಾವುದೇ ಕಾರಣಕ್ಕೂ ನಾವು ವಿಲೀನಕ್ಕೆ ಬಿಡಲಾರೆವು ಎಂದು ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ವಿಜಯಾ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಕೊಣಾಜೆ ವಿಜಯಾ ಬ್ಯಾಂಕ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆ ವಹಿಸಿ, ಮುಂದಿನ ಮೂರು ತಿಂಗಳಲ್ಲಿ ವಿಜಯಾ ಬ್ಯಾಂಕ್ ವಿಲೀನ ಆಗುತ್ತದೆ. ಸುಂದರ ರಾಮ ಶೆಟ್ಟಿ ಹೆಸರು ರಸ್ತೆಗೆ ಇಡಲು ಅಡ್ಡಿಯಾಗಿದ್ದಾರೆ ಎಂದು ಪ್ರಚಾರ ಮಾಡಿ ಜೆ.ಆರ್.ಲೋಬೋ ಅವರ ಸೋಲಿಗೆ ಕಾರಣರಾದ ಬಿಜೆಪಿ, ಇದೀಗ ವಿಜಯಾ ಬ್ಯಾಂಕ್ ವಿಲೀನ ಮಾಡುವಾಗ ಮೌನವೇಕೆ, ಸಂಸದ ನಳಿನ್ ಕುಮಾರ್ ಕಟೀಲ್‍ಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ಮುಖಂಡರಾದ ಉಮ್ಮರ್ ಪಜೀರ್, ಕೊಣಾಜೆ ಪಂಚಾಯತ್ ನಝರ್ ಷಾ ಪಟ್ಟೋರಿ, ಮಾಜಿ ಅಧ್ಯಕ್ಷ ಶೌಕತ್ ಅಲಿ, ಪಜೀರು ಗ್ರಾಮ ಪಂ. ಅಧ್ಯಕ್ಷ ಸೀತಾರಾಮ ಶೆಟ್ಟಿ, ತಾಲೂಕು ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಜಬ್ಬಾರ್ ಬೋಳಿಯಾರ್, ಪದ್ಮಾವತಿ ಪೂಜಾರಿ, ಮಮತಾ ಗಟ್ಟಿ, ಇಕ್ಬಾಲ್ ಸಾಮಾಣಿಗೆ, ಅಚ್ಯುತ ಗಟ್ಟಿ, ಶ್ರೀನಿವಾಸ ಶೆಟ್ಟಿ ಪುಲ್ಲು, ಮೇಗಾ ಸಲೀಂ, ಅಚ್ಚುತ ಗಟ್ಟಿ, ಅನಿತಾ ಡಿಸೋಜ, ಪದ್ಮನಾಭ ಗಟ್ಟಿ, ಬದ್ರುದ್ದೀನ್ ಫರೀದ್ ನಗರ, ಬಶೀರ್ ಉಂಬುದ, ಎ.ಕೆ.ಅಬ್ದುಲ್ ರಹಿಮಾನ್ ಇನ್ನಿತರರು ಉಪಸ್ಥಿತರಿದ್ದರು. 

ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮುಸ್ತಫಾ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News