ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಶಾಲೆಯಲ್ಲಿ ವಾರ್ಷಿಕೋತ್ಸವ

Update: 2019-01-11 15:04 GMT

ಮೂಡುಬಿದಿರೆ, ಜ.11: ಪುತ್ತಿಗೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ಎರಡು ದಿನಗಳಲ್ಲಿ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

 ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಸರಗೋಡು ಆಲಿಯ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಜಲೀಲ್, ವಿದ್ಯಾಸಂಸ್ಥೆಗಳು ಕೇವಲ ವಿದ್ಯೆಗೆ ಮಾತ್ರ ಸೀಮಿತವಾಗಿರದೆ ಜೀವನ ಮೌಲ್ಯಗಳನ್ನು ಕಲಿಸಿ ಕೊಡುವ ಕೇಂದ್ರಗಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಖ್ ಅನೀಸುರ್ರಹ್ಮಾನ್ ಉಮ್ರಿ ಮದನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಗಾಧ ಪ್ರತಿಭೆಯನ್ನು ಪೋಷಿಸುವಲ್ಲಿ ಶಿಕ್ಷಕ ಮತ್ತು ಪೋಷಕರ ಪಾತ್ರ ಮಹತ್ವದ್ದು ಎಂದರು.

ಕಣಚೂರು ಕಾಲೇಜಿನ ಪ್ರಾಂಶುಪಾಲ ಯು.ಟಿ.ಇಕ್ಬಾಲ್ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಯು.ಎಂ.ಮೊಯ್ದಿನ್ ಕುಂಞಿ, ಕಿಶನ್ ಗಂಜ್ ಬಿಹಾರ್ ಸಂಸ್ಥಾಪಕ, ಮುತೀಉರ್ರಹ್ಮಾನ್ ಉಮ್ರಿ ಮದನಿ, ಟ್ರಸ್ಟಿಗಳಾದ ಮುಹಮ್ಮದ್ ಅಶ್ಫಾಕ್, ಫೈಝ್ ಮುಹಮ್ಮದ್, ಅಶ್ರಫ್, ಮುಹಮ್ಮದ್ ಎನ್.ಧಾರವಾಡ ಉಪಸ್ಥಿತರಿದ್ದರು.

ಶಿಕ್ಷಕ ಫಕ್ರುದ್ದೀನ್ ರಾಝಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮುಹಮ್ಮದ್ ಶಹಾಂ ಸ್ವಾಗತಿಸಿದರು. ಅಲ್ ಫುರ್ಖಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮುಸವ್ವಿರ್ ಉಮ್ರಿ ಮದನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News