ಪರಸ್ಪರ ಸಹೋದರಂತೆ ಬದುಕುವುದು ನಮ್ಮ ಸಂಸ್ಕೃತಿ: ಸಂಗೀತಗಾರ ಡಾ.ಯೇಸುದಾಸ್

Update: 2019-01-11 17:09 GMT

ಮಂಗಳೂರು, ಜ.11: ಜಾತಿ, ಭೇದ ಮರೆತು ಮಾನವರೆಲ್ಲ ಸಹೋದರರಂತೆ ಬದುಕುವುದು ನಮ್ಮ ಸಂಸ್ಕೃತಿ. ಅದನ್ನು ಮರೆಯಬಾರದು ಎಂದು ಪದ್ಮವಿಭೂಷಣ ಸಂಗೀತಗಾರ ಡಾ.ಯೇಸುದಾಸ್ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಕೇರಳ ಸಮಾಜಂ ಸಂಘಟನೆಯ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡ ಕಲಾಸಂದ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

‘ಸರ್ವೆ ಜನಾ ಸುಖಿನೋ ಭವಂತು’ ಎಂಬುವುದು ಈ ದೇಶದ ಹಿರಿಯರಿಂದ ಬಂದ ಸಂಸ್ಕೃತಿಯಾಗಿದೆ. ಅದನ್ನು ಹಿರಿಯರು ತಮ್ಮ ಮಕ್ಕಳಲ್ಲೂ ಬೆಳೆಸಬೇಕಾಗಿದೆ ಎಂದು ಯೇಸುದಾಸ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕೇರಳ ಸಮಾಜಂನ ಮಾಜಿ ಅಧ್ಯಕ್ಷ ಕೆ.ಸಚ್ಚೇಂದ್ರನಾಥ್, ನಿರ್ದೇಶಕ ಗುರುಕಿರಣ್, ಕರುಣಾಕರನ್, ಕೇರಳ ಸಮಾಜಂ ಅಧ್ಯಕ್ಷ ಕೆ.ರಾಜನ್, ಗೋಪಾಲನ್, ಶಂಕರ್, ಕೋಸ್ಟ್‌ಗಾರ್ಡ್ ಡಿಐಜಿ ಎಸ್.ಎಸ್. ದಸಿಲ್ಲಾ, ಕರುಣಾಕರನ್, ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.

ಮ್ಯಾಕ್ಸಿಂ ಸೆಬಾಸ್ಟಿಯನ್ ಸ್ವಾಗತಿಸಿದರು. ಗೋಪಾಲನ್ ನಾಯರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News