ಬೋಟ್‌ ನಿಂದ ಬಿದ್ದು ಮೀನು ಕಾರ್ಮಿಕ ಸಾವು

Update: 2019-01-11 17:20 GMT

ಮಂಗಳೂರು, ಜ.11: ನಗರದ ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ವೊಂದರಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ತಮಿಳುನಾಡಿನ ವಿಲ್ಲುಪುರಂನ ವೇಲನ್ (41) ಮೃತಪಟ್ಟವರು. ಮೃತದೇಹ ಪತ್ತೆಯಾಗಿದೆ.

ಘಟನೆ ವಿವರ: ನಗರದ ಮೀನುಗಾರಿಕೆ ಧಕ್ಕೆಯಿಂದ 9 ಜನ ಮೀನುಗಾರಿಕಾ ಕಾರ್ಮಿಕರು ‘ರಾಜಲಕ್ಷ್ಮೀ’ ಎಂಬ ಹೆಸರಿನ ಬೋಟಿನಲ್ಲಿ ಜ.7ರ ಸೋಮವಾರ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಕೆಲಸ ಮುಗಿಸಿ ಗುರುವಾರ ವಾಪಸಾಗುತ್ತಿದ್ದಾಗ ಧಕ್ಕೆಯಿಂದ ಅಂದಾಜು 15ಕಿಲೋ ಮೀಟರ್ ದೂರದಲ್ಲಿರುವಾಗ ಆಯತಪ್ಪಿ ಕಾರ್ಮಿಕ ವೇಲನ್ ಸಮುದ್ರಕ್ಕೆ ಬಿದ್ದಿದ್ದಾರೆ.

ಕೂಡಲೇ ಇತರ ಕಾರ್ಮಿಕರು ಬೋಟ್ ಚಾಲಕನಿಗೆ ತಿಳಿಸಲಾಯಿತು. ಆ ಬಳಿಕ ಬೋಟನ್ನು ಹಿಂದಿರುಗಿಸಿ ಕಾರ್ಮಿಕ ಬಿದ್ದ ಜಾಗಕ್ಕೆ ಹೋಗಿ ಶೋಧ ನಡೆಸಲಾಯಿತು. ಇಬ್ಬರು ನೀರಿಗೆ ಜಿಗಿದು ಶೋಧ ನಡೆಸಿದಾಗ ವೇಲನ್ ದೇಹ ಪತ್ತೆಯಾಗಿದೆ.

ಆಸ್ಪತ್ರೆಗೆ ಸಾಗಾಟ: ಬೋಟ್‌ನಲ್ಲಿ ವೇಲನ್ ದೇಹವನ್ನು ತಂದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲೇ ವೇಲನ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಮಹಜರು ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News