ಫೆ.9ರಿಂದ ಅಲೋಶಿಯಸ್ ಸಾಹಿತ್ಯ ಸಮ್ಮೇಳನ

Update: 2019-01-11 17:31 GMT

ಮಂಗಳೂರು, ಜ.11: ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಸ್ನಾತಕೋತ್ತರ ಮತ್ತು ಸಂಶೋಧನ ವಿಭಾಗವು ಫೆ.9ರಿಂದ 16ವರೆಗೆ ಎಂಟು ದಿನಗಳ ‘ಅಲೋಶಿಯಸ್ ಸಾಹಿತ್ಯ ಸಮ್ಮೇಳನ’ವನ್ನು ಆಯೋಜಿಸಿದೆ.

ಈ ಸಮ್ಮೆಳನದಲ್ಲಿ ಫೆ.9ರಿಂದ 10ರವರೆಗೆ ‘ಚಲನಚಿತ್ರ ರಸಗ್ರಹಣ’ ಶಿಬಿರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಅಭಯ ಸಿಂಹ ನಡೆಸಿಕೊಡಲಿದ್ದಾರೆ.

ಫೆ.11 ಮತ್ತು 12ರಂದು ‘ಪರಿಸರ ಮತ್ತು ಸಾಹಿತ್ಯ’ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ಪ್ರೊ.ಪ್ರಮೋದ್ ಕೆ.ನಾಯರ್, ನಾಗೇಶ ಹೆಗ್ಗಡೆ, ರಘುನಂದನ, ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ವೈಶಾಲಿ ಕೆ.ಎಸ್., ಶಿವಸುಂದರ್, ಪ್ರೊ.ನಾಗರಾಜು ಹಾಗೂ ಪ್ರೊ.ವಿಜಯಕುಮಾರ್ ಬೋರಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದು, ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಫೆ.13, 14 ಮತ್ತು 15ರಂದು ಕವಿ, ನಾಟಕಕಾರ ಹಾಗೂ ರಂಗ ನಿರ್ದೇಶಕ ರಘುನಂದನ ‘ನಾಟಕ ಮತ್ತು ಇತರ ಕಲಾಪ್ರಕಾರಗಳ ಮೂಲಕ ಸಂಸ್ಕೃತಿ ಅಧ್ಯಯನ’ ಎಂಬ ಕಮ್ಮಟವನ್ನು ನಡೆಸಿಕೊಡಲಿದ್ದಾರೆ. ಫೆ.16ರಂದು ಎಡಿಟೋರಿಯಲ್ ವ್ಯಂಗ್ಯಚಿತ್ರಗಳನ್ನು ರಚಿಸುವ ಬಗೆಗಿನ ಕಮ್ಮಟವನ್ನು ಸತೀಶ್ ಆಚಾಯ ನಡೆಸಿಕೊಡಲಿದ್ದಾರೆ.

ಈ ಮೇಲಿನ ಕಮ್ಮಟ ಹಾಗೂ ವಿಚಾರಸಂಕಿರಣದಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಸಕ್ತರು ಜ.20ರೊಳಗೆ ಜಾಲತಾಣ http://staloysiuscollege.co.in/aloysian-literature-festival ದಲ್ಲಿ ಕಡ್ಡಾಯವಾಗಿ ನೋಂದಾಯಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News