ಕಾಪಿಗುಡ್ಡೆ ನಿವಾಸಿಯ ಕೊಲೆಯತ್ನ ಪ್ರಕರಣ: ಆರೋಪಿ ಖುಲಾಸೆ

Update: 2019-01-11 17:35 GMT

ಮಂಗಳೂರು, ಜ.11: ನಗರದ ಕಾವೂರು ಗ್ರಾಮದ ಆನಂದ ನಗರದ ಕಾಪಿಗುಡ್ಡೆ ನಿವಾಸಿ ಲಕ್ಷ್ಮಣ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಆನಂದನಗರ ಕಾಪಿಗುಡ್ಡೆ ನಿವಾಸಿ ಮನೋಹರ್ (43) ಖುಲಾಸೆಗೊಂಡ ವ್ಯಕ್ತಿ.

ಘಟನೆ ವಿವರ: 2015ರ ಫೆ.10ರಂದು ಸಂಜೆ 6 ಗಂಟೆಗೆ ಆರೋಪಿ ಅಮರನಾಥ ಎಂಬಾತ ತನ್ನ ಗೆಳೆಯರಾದ ಮುನ್ನ ಮತ್ತು ಮನೋಹರ ಜತೆ ಸೇರಿ ಲಕ್ಷ್ಮಣ ಅವರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಬಳಿಕ ಮುನ್ನ ಮತ್ತು ಮನೋಹರ್ ಎಂಬವರು ಲಕ್ಷ್ಮಣ್‌ನನ್ನು ಹಿಡಿದುಕೊಂಡಾಗ ಅಮರನಾಥ ಕೈಯಲ್ಲಿದ್ದ ಕತ್ತಿಯಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮುಂದಾಗಿದ್ದನು. ಇದರಿಂದ ಲಕ್ಷ್ಮಣ ಅವರ ಎಡಕೈಯ ಮಣಿಗಂಟಿನ ಬಳಿ ತಾಗಿ ಗಾಯವಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಲವಾಗಿದೆ ಎಂದು ತೀರ್ಮಾನಿಸಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಎ.ಡಿ. ನಾಗರಾಜ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 20ಮಂದಿ ಸಾಕ್ಷಿ ವಿಚಾರಣೆ ನಡೆಸಲಾಗಿದೆ. ಆರೋಪಿಯ ಪರವಾಗಿ ತಲೆಕಾನ ರಾಧಾಕೃಷ್ಣ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News