ರೈಲಿನಲ್ಲಿ ಅಕ್ರಮ ಮದ್ಯ ವಶ

Update: 2019-01-11 17:40 GMT

ಉಡುಪಿ, ಜ.11: ಮಡ್‌ಗಾಂವ್- ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಗುರುವಾರ ರೈಲ್ವೆ ಪೊಲೀಸ್ ಪೋರ್ಸ್‌ನ ಉಡುಪಿ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್ ನೇತೃತ್ವದ ತಂಡ ಸುಮಾರು 60,000ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದೆ.

ಪೊಲೀಸರನ್ನು ನೋಡಿದ ಆರೋಪಿಗಳು ಸದ್ದಿಲ್ಲದೇ ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಅಕ್ರಮ ಮದ್ಯವನ್ನು ರೈಲ್ವೆ ಪೊಲೀಸರು ಉಡುಪಿಯ ಅಬಕಾರಿ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News