ಮೂಡುಬಿದಿರೆ: ಮತ್ತೆ ಮುಂದುವರಿದ ನಗದು ಕಳ್ಳರ ಕಾಟ

Update: 2019-01-11 17:56 GMT

ಮೂಡಬಿದ್ರೆ,ಜ.11: ಇಲ್ಲಿನ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕಳ್ಳರ ಹಾವಳಿ ಮತ್ತೆ ಮುಂದುವರಿದಿದೆ. ಶುಕ್ರವಾರ ಮತ್ತೊಮ್ಮೆ 60 ಸಾವಿರ ರೂ ಎಗರಿಸುವ ಮೂಲಕ ಖದೀಮರು ಪೊಲೀಸರಿಗೆ ಸವಾಲಾಗಿ ಕಾಡತೊಡಗಿದ್ದಾರೆ.

ಕಳೆದ ಬುಧವಾರ ಮಹಿಳೆಯೋರ್ವರು ಬಸ್ ನಿಲ್ದಾಣದಲ್ಲಿ ಪರ್ಸ್ ಕಳೆದುಕೊಂಡು ಪರದಾಡುವ ಸ್ಥಿತಿ ಉಂಟಾಗಿತ್ತು. ಗುರುವಾರ ಬುರ್ಖಾದಾರಿ ಮಹಿಳೆಯೋರ್ವಳು ಗುರುವಾರ ಪೇಟೆಯಲ್ಲಿಕಳ್ಳತನ ನಡೆಸುವ ವೇಳೆಯಲ್ಲೇ ರೆಡ್‍ಹ್ಯಾಂಡಾಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಪೊಲೀಸರ ಅಥಿತಿಯಾಗಿದ್ದಳು. ಇದೀಗ ಶುಕ್ರವಾರ ಲೈನ್ ಸೇಲ್ ವ್ಯಾಪಾರಿಯೋರ್ವರ  60 ಸಾವಿರ ರೂ  ನಗದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಹಳೇ ಮಾರುಕಟ್ಟೆ ಎದುರಿನ ವಾಣಿಜ್ಯ ಮಳಿಗೆಯೊಂದರ ಎದುರು ಪಾರ್ಕ್ ಮಾಡಲಾಗಿದ್ದ ಲೈನ್‍ಸೇಲ್‍ನ ವಾಹನದಿಂದ ಈ ಹಣವನ್ನು ಕಳವು ಮಾಡಲಾಗಿದೆ. ಪೊಲೀಸರು ಸಮೀಪದ ಸಿಸಿ ಕ್ಯಾಮಾರಾಗಳನ್ನು ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಬುಧವಾರ ಪರ್ಸ್ ಕಳಕೊಂಡಿದ್ದ ಮಹಿಳೆಯದ್ದೆನ್ನಲಾದ ಪರ್ಸ್ ಬೆಳ್ಮಣ್ ಸಮೀಪ ಪತ್ತೆಯಾಗಿದೆ. ಅದರಲ್ಲಿದ್ದ ನಗದು, ಎಟಿಮ್ ಕಾರ್ಡ್ ಮಾತ್ರ ಎಗರಿಸಿ ಉಳಿದಂತೆ ಪರ್ಸನ್ನು ಕಳ್ಳರು ಎಸೆದಿದ್ದು ರಿಕ್ಷಾ ಚಾಲಕರೋರ್ವರು ಅದನ್ನು ವಾರೀಸುದಾರರಿಗೆ ಮರಳಿಸಿದ್ದಾರೆಂದು ತಿಳಿದುಬಂದಿದೆ. ಒಟ್ಟಾರೆ ನಗರದಲ್ಲಿ ಸಿಸಿ ಕ್ಯಾಮಾರ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳವನ್ನಾಗಿಸಿರುವ ಕದೀಮರ ತಂಡ ತಮ್ಮ ಕೃತ್ಯದ ಮೂಲಕ ಪೊಲೀಸರಿಗೆ ದಿನಂಪ್ರತಿ ಸವಾಲೆಸೆಯುವಂತೆ ಕೃತ್ಯ ಮುಂದುವರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News