ಗಂಗುಲಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

Update: 2019-01-12 12:22 GMT
ರೋಹಿತ್ ಶರ್ಮಾ 133 ರನ್ (129ಎ, 10ಬೌ,6ಸಿ) 

ಸಿಡ್ನಿ, ಜ.12: ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಅವರು ಶನಿವಾರ ಆಸ್ಟ್ರೇಲಿಯ ವಿರುದ್ಧ  ಶನಿವಾರ ಮೊದಲ ಏಕದಿನ ಪಂದ್ಯದಲ್ಲಿ 22ನೇ ಶತಕ ದಾಖಲಿಸುವ ಮೂಲಕ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ದಾಖಲೆ ಸರಿಗಟ್ಟಿದ್ದಾರೆ. ಗಂಗುಲಿ 311 ಏಕದಿನ ಪಂದ್ಯಗಳಲ್ಲಿ 22 ಶತಕ ದಾಖಲಿಸಿದ್ದರು.

194ನೇ ಏಕದಿನ ಪಂದ್ಯವನ್ನಾಡಿದ ರೋಹಿತ್ ಶರ್ಮಾ ಅವರು 110 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು. ಅವರು  133 ರನ್ (129ಎ, 10ಬೌ,6ಸಿ) ಗಳಿಸಿ ಔಟಾದರು.

ಗಂಗುಲಿ  ಹಾಗೂ ಶ್ರೀಲಂಕಾದ ಮಾಜಿ ಆರಂಭಿಕ ದಾಂಡಿಗ ತಿಲಕರತ್ನೆ ದಿಲ್ಶನ್ 22 ಶತಕ ದಾಖಲಿಸಿದ್ದರು.  ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ದಾಖಲಿಸಿದವರಲ್ಲಿ ರೋಹಿತ್ 9ನೇ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 463 ಏಕದಿನ ಪಂದ್ಯಗಳಲ್ಲಿ 49 ಶತಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

 ನಾಯಕ ವಿರಾಟ್ ಕೊಹ್ಲಿ 38 ಶತಕ ದಾಖಲಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಬಳಿಕದ ಸ್ಥಾನವನ್ನು  ಕ್ರಮವಾಗಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (30 ಶತಕ), ಶ್ರೀಲಂಕಾದ ಸನತ್ ಜಯಸೂರ್ಯ (28 ಶತಕ), ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ( 26 ಶತಕ) , ಎಬಿ ಡಿವಿಲಿಯರ್ಸ್ (25 ಶತಕ), ಶ್ರೀಲಂಕಾದ ಕುಮಾರ ಸಂಗಕ್ಕರ(25 ಶತಕ), ಮತ್ತು ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ (23 ಶತಕ) ಪಡೆದಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ದಾಖಲಿಸಿದ 11 ದಾಂಡಿಗರು

1) ಸಚಿನ್ ತೆಂಡೂಲ್ಕರ್ 49   ಶತಕ
2) ವಿರಾಟ್ ಕೊಹ್ಲಿ 38 
3) ರಿಕಿ ಪಾಂಟಿಂಗ್ 30 
4) ಸನತ್ ಜಯಸೂರ್ಯ 28 
5). ಹಾಶೀಮ್ ಅಮ್ಲ 26 
6) ಎಬಿಡಿ ವಿಲಿಯರ್ಸ್ 25 
7) ಕುಮಾರ ಸಂಗಕ್ಕರ 25 
8) ಕ್ರಿಸ್ ಗೇಲ್ 23 
9) ರೋಹಿತ್ ಶರ್ಮಾ  22 
10) ಸೌರವ್ ಗಂಗುಲಿ  22 
11) ತಿಲಕರತ್ನೆ ದಿಲ್ಶನ್   22 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News