ಕೆಮ್ಮಣ್ಣು: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
ಉಡುಪಿ, ಜ.12: ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕ ಹಾಗೂ ಎಸ್‌ಐಒ ಉಡುಪಿ ಜಿಲ್ಲಾ ಘಟಕಗಳ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿ ಗಳಿಗಾಗಿ ‘ಯಶಸ್ಸಿನ ರಹಸ್ಯ’ ಎಂಬ ವೃತ್ತಿ ಮಾರ್ಗದರ್ಶನ ಕಾರ್ಯ ಕ್ರಮವನ್ನು ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್‌ನಲ್ಲಿ ಏರ್ಪಡಿಸ ಲಾಗಿತ್ತು.
ಕೆಮ್ಮಣ್ಣು ಚರ್ಚ್‌ನ ಧರ್ಮಗುರು ರೆ.ಫಾ.ವಿಕ್ಟರ್ ಡಿಸೋಜ ಆಶೀರ್ವಚನ ನೀಡಿದರು. ತರಬೇತುದಾರ ಆತೀಕ್ ರೆಹಮಾನ್ ವ್ಯಕ್ತಿತ್ವ ವಿಕಸನದ ಕುರಿತು ಹಾಗೂ ವೃತ್ತಿ ಮಾರ್ಗದರ್ಶನ ತರಬೇತುದಾರ ಉಮರ್ ಯು.ಎಚ್. ಪರೀಕ್ಷೆ ಎದುರಿ ಸುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಎಸ್‌ಐಒ ಹೂಡೆ ಘಟಕದ ಅಧ್ಯಕ್ಷ ಮುಹಮ್ಮದ್ ನಾಸೀರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಅಫ್ವಾನ್, ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಮ್ ಹೈಕಾಡಿ, ಜಮೀ ಯ್ಯತುಲ್ ಫಲಾಹ್‌ನ ನಾಸೀರ್ ನೇಜಾರು, ಕಾಸಿಂ ಬಾರಕೂರು ಮೊದ ಲಾದವರು ಉಪಸ್ಥಿತರಿದ್ದರು.
ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕ ಅಧ್ಯಕ್ಷ ಅಬ್ದುಲ್ ಖತೀಬ್ ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ವೌಲಾ ಸ್ವಾಗತಿಸಿ ದರು. ಮುಹಮ್ಮದ್ ನಾಸೀರ್ ಕಾರ್ಯಕ್ರಮ ನಿರೂಪಿಸಿದರು.