ಕುಂದಾಪುರ ನ್ಯಾಯಾಧೀಶ ಕುಮಾರಸ್ವಾಮಿಗೆ ಬೀಳ್ಕೊಡುಗೆ

Update: 2019-01-12 12:21 GMT

ಕುಂದಾಪುರ, ಜ.12: ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಪದೋನ್ನತಿ ಹೊಂದಿ ಕಲಬುರ್ಗಿಗೆ ವರ್ಗಾವಣೆಗೊಂಡ ಡಿ.ಪಿ.ಕುಮಾರಸ್ವಾಮಿ ಅವರಿಗೆ ಕುಂದಾ ಪುರ ಬಾರ್ ಅಸೋಸಿಯೇಶನ್ ವತಿಯಿಂದ ಶುಕ್ರವಾರ ಕೋರ್ಟ್ ಹಾಲ್‌ನಲ್ಲಿ ಬೀಳ್ಕೊಡುಗೆ ಮಾರಂಭವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಮಾತನಾಡಿ, ನ್ಯಾಯಾಧೀಶರು ಯಾವ ರೀತಿಯಲ್ಲಿ ನ್ಯಾಯದಾನ ಅಥವಾ ನ್ಯಾಯ ತೀರ್ಪು ನೀಡಿದ್ದಾರೆ ಎಂಬುದು ಸಮಾಜ ಹಾಗೂ ವಕೀಲರಿಂದ ತಿಳಿಯಬಹುದಾಗಿದೆ. ಉತ್ತಮ ನ್ಯಾಯ ತೀರ್ಪು ನೀಡುವಂತಹ ನ್ಯಾಯಾಧೀಶರು ನ್ಯಾಯಾಂಗ ವ್ಯವಸ್ಥೆಗೆ ಬಹುಮುಖ್ಯವಾಗಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ನ್ಯಾಯಾಧೀಶ ಕುಮಾರಸ್ವಾಮಿ ಮಾತನಾಡಿ, ಎಲ್ಲ ನ್ಯಾಯಾಧೀಶರು ಕೂಡ ಮನುಷ್ಯ ಸಹಜ ಭಾವನೆಗಳನ್ನು ಹೊಂದಿರುವುದು ಸಹಜ. ಸಮಾಜಕ್ಕೆ ಒಳಿತಾಗುವಂತಹ ರೀತಿಯಲ್ಲಿ ನನ್ನಿಂದಾದಷ್ಟು ಮಟ್ಟಿಗೆ ಸೇವೆ ಮಾಡಿದ್ದೇನೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ನಿರಂಜನ ಹೆಗ್ಡೆ ಸಳ್ವಾಡಿ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್, ಹಿರಿಯ ನ್ಯಾಯವಾದಿಗಳಾದ ರವಿಕಿರಣ್ ಮುರ್ಡೇಶ್ವರ, ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿದರು.

ಒಂದನೇ ಹೆಚ್ಚುವರಿ ನ್ಯಾಯಾಧೀಶ ಶ್ರೀಕಂಠ, ಎರಡನೇ ಹೆಚ್ಚುವರಿ ನ್ಯಾಯಾ ಧೀಶ ಚಂದ್ರಶೇಖರ್ ಬಣಕಾರ, ಹೆಚ್ಚುವರಿ ಸರಕಾರಿ ಅಭಿಯೋಜಕರಾದ ಸುಮಂಗಲಾ ನಾಯ್ಕಾ, ಪ್ರವೀಣ್ ನಾಯಕ್ ಮೊದಲಾದವರು ಉಪಸ್ಥಿತರಿ ದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಂದೆ ಸ್ವಾಗತಿಸಿ ದರು. ವಕೀಲ ಶ್ರಿೀನಾಥ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News