ಎಸ್ಕೆಎಂಡಬ್ಲ್ಯೂಎ ವಾರ್ಷಿಕ ಮಹಾಸಮಾವೇಶ

Update: 2019-01-12 14:09 GMT

ಮಂಗಳೂರು/ಕತಾರ್, ಜ.12: ಸೌತ್ ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ಎಸ್ಕೆಎಂಡಬ್ಲೂಎ)ನ 27ನೇ ವಾರ್ಷಿಕ ಮಹಾಸಮಾವೇಶ ಕತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್ ಎಂಬಸಿ ಆಫ್ ಇಂಡಿಯಾದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್ ಅಬ್ಬಾಸ್ ಮೂಡುಬಿದಿರೆ, ಕಳೆದ 27 ವರ್ಷಗಳಲ್ಲಿ ಈ ಸಂಸ್ಥೆ ದ.ಕ. ಮತ್ತು ಉಡುಪಿಯ ನೂರಾರು ಬಡವರಿಗೆ ಆರೋಗ್ಯ, ಶಿಕ್ಷಣ, ವಸತಿ ವ್ಯವಸ್ಥೆ ಮಾಡುತ್ತಾ ಬಂದಿದೆ. ಕಿಡ್ನಿ ಸಮಸ್ಯೆ ರೋಗಿಗಳಿಗೆ ಡಯಾಲಿಸಿಸ್ ಯಂತ್ರವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಉಚಿತವಾಗಿ ನೀಡಿದೆ ಎಂದರು.

ಮುಂದಿನ ದಿನಗಳಿಗೆ ಇನ್ನೂ ಹೆಚ್ಚಿನ ಸೇವೆ ನೀಡುವ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಅಬ್ದುಲ್ ಮಜೀದ್ ಅಬ್ಬಾಸ್ ಮೂಡುಬಿದಿರೆ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಫಿರೋಝ್ ವಹಿಸಿದ್ದರು. ಕಾರ್ಯದರ್ಶಿ ಶಮೀಮ್, ಮಾಜಿ ಅಧ್ಯಕ್ಷ ಅಬ್ದುಲ್ಲಾ ಮೋನು ಇಬ್ರಾಹೀಂ ಬ್ಯಾರಿ ಸತ್ತಾರ್, ನಾಸಿರ್ ಉಪಸ್ಥಿತರಿದ್ದರು. ಕಾಸಿಂ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News