ಗಿಳಿಗಳ ಮಾರಾಟ: ಆರೋಪಿ ಸಹಿತ ಗಿಳಿಗಳು ವಶಕ್ಕೆ

Update: 2019-01-12 14:13 GMT

ಬಂಟ್ವಾಳ, ಜ. 12: ಗಿಳಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಸಿಐಡಿ ಪೊಲೀಸರು ಗಿಳಿಗಳ ಪಂಜರ ಸಹಿತ ಓರ್ವನನ್ನು ಮೆಲ್ಕಾರ್ ನಲ್ಲಿ ವಶಕ್ಕೆ ತೆಗೆದುಕೊಂಡು ಬಂಟ್ವಾಳ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಫ್ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

ತಮಿಳುನಾಡು ಮೂಲಕ ಗಿಳಿಗಳನ್ನು ಖರೀದಿಸಿ, ಗ್ರಾಹಕರಿಗೆ ಈತ ಮಾರುತ್ತಿದ್ದ ಎಂಬ ಮಾಹಿತಿಯಂತೆ ಗ್ರಾಹಕರ ಸೋಗಿನಲ್ಲಿ ಬೆಂಗಳೂರಿನ ಸಿಐಡಿ ಪೊಲೀಸರು ಈತನನ್ನು ಸಂಪರ್ಕಿಸಿದಾಗ ಎರಡು ಪಂಜರಗಳಲ್ಲಿ 26 ಗಿಳಿಗಳನ್ನು ಮಾರಲು ಪ್ರಯತ್ನಿಸುತ್ತಿದ್ದ ವೇಳೆ ಆತನನ್ನು ಬಂಧಿಸಿ, ಬಂಟ್ವಾಳ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಕರಣ ಹಸ್ತಾಂತರಿಸಲಾಯಿತು.

ಈತನ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸುರೇಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News