×
Ad

ವಿಜ್ಞಾನದ ದಾಸ್ಯದಿಂದ ಮಾನವೀಯತೆ ಕುಂಠಿತ: ಏರ್ಯ

Update: 2019-01-12 20:55 IST

ಉಡುಪಿ, ಜ.12: ಜಗತ್ತು ಇಂದು ವೈಜ್ಞಾನಿಕವಾಗಿ ಬೆಳೆಯುತ್ತಿದ್ದು, ವಿಜ್ಞಾನದ ದಾಸರಾದ ಪರಿಣಾಮ ನಮ್ಮಲ್ಲಿ ಮಾನವೀಯತೆ, ಹೃದಯವಂತಿಕೆ ಕಡಿಮೆ ಆಗುತ್ತಿದೆ ಎಂದು ಹಿರಿಯ ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿಷಾಧ ವ್ಯಕ್ತಪಡಿಸಿದ್ದಾರೆ.

ಉಡುಪಿ ರಂಗಭೂಮಿ ವತಿಯಿಂದ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ‘ಸಾಹಿತ್ಯ ಕಲಾಶೇವಧಿ’ ರಂಗಭೂಮಿ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು. ಸಾಹಿತ್ಯ, ಸಂಸ್ಕೃತಿ, ಸಂಗೀತ ಸೇರಿದಂತೆ ಕಲಾ ಪ್ರಕಾರಗಳ ಮೇಲಿನ ಒಲವು ನಮ್ಮಲ್ಲಿ ಕಡಿಮೆಯಾಗುತ್ತಿವೆ. ಪರಸ್ಪರ ಸಂಬಂಧಗಳು ಕಡಿದುಹೋಗುತ್ತಿವೆ. ಮಾನವೀಯ ಸಂಬಂಧಗಳು ಕುಂಠಿತವಾಗುತ್ತಿವೆ. ಮನುಷ್ಯ ಸಂಬಂಧಗಳನ್ನು ವೈಜ್ಞಾನಿಕ ತುಣುಕಗಳ ಮೂಲಕವೇ ನೋಡಲಾಗುತ್ತಿವೆ ಎಂದರು.

ಹಿರಿಯ ವಿದ್ವಾಂಸ ಪುಂಡಿಕಾ ಗಣಪತಿ ಭಟ್ ಅಭಿನಂದನಾ ಭಾಷಣ ಮಾಡಿದರು. ಯುಪಿಸಿಎಲ್ ಅದಾನಿ ಗ್ರೂಪ್‌ನ ಜಂಟಿ ಉಪಾಧ್ಯಕ್ಷ ಕಿಶೋರ್ ಆಳ್ವ, ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ, ಹಿರಿಯ ವಿದ್ವಾಂಸ ಡಾ.ರಾಘವ ನಂಬಿಯಾರ್ ಮುಖ್ಯ ಅತಿಥಿಗಳಾಗಿದ್ದರು.

ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ನಂದಕುಮಾರ್ ಎಂ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯ ದರ್ಶಿ ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ದೃಶ್ಯ ಬೆಂಗಳೂರು ತಂಡದಿಂದ ‘ಅಭಿಯಾನ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News