ಮಲ್ಪೆ: 20 ದಿನಗಳ ಬಳಿಕ ಸಮುದ್ರಕ್ಕೆ ಇಳಿದ ಮೀನುಗಾರಿಕಾ ಬೋಟುಗಳು

Update: 2019-01-12 15:27 GMT

ಮಲ್ಪೆ, ಜ.12: ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆ ಯಾಗಿರುವ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಮೀನುಗಾರಿಕೆ ಸ್ಥಗಿತಗೊಳಿಸಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಆಳಸಮುದ್ರ ಮೀನುಗಾರಿಕಾ ಬೋಟು ಗಳ ಪೈಕಿ ಸುಮಾರು 150 ಬೋಟುಗಳು ಇಂದು ರಾತ್ರಿಯಿಂದ ಸಮುದ್ರಕ್ಕೆ ಇಳಿದಿದ್ದು, ನಾಪತ್ತೆಯಾಗಿರುವ ಬೋಟು ಹಾಗೂ ಮೀನುಗಾರರನ್ನು ಹುಡು ಕುವ ಕೆಲಸ ಮಾಡಲಿವೆ.

ಡಿ.15ರಿಂದ ಏಳು ಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಬೋಟು ಸಂಪರ್ಕ ಸಿಗದೆ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಡಿ.23ರಿಂದ ಮಲ್ಪೆಗೆ ಆಗಮಿಸಿದ್ದ ಬೋಟುಗಳು ಮರಳಿ ಮೀನುಗಾರಿಕೆಗೆ ತೆರಳದೆ ಬಂದರಿ ನಲ್ಲೇ ಲಂಗರು ಹಾಕಿದ್ದವು. ಅಂದಿನಿಂದ ಸುಮಾರು 1100 ಆಳಸಮುದ್ರ ಮೀನು ಗಾರಿಕಾ ಬೋಟುಗಳು ಮಲ್ಪೆ ಬಂದರಿನಲ್ಲೇ ಉಳಿದು ಕೊಂಡಿದ್ದವು.

ಜ.6ರ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದ ಬಳಿಕ ಮರುದಿನ ಅಂದರೆ ಜ.7ರಂದು ಬೋಟುಗಳು ಮೀನುಗಾರಿಕೆ ಹೊರಡುವ ಬಗ್ಗೆ ಮೀನುಗಾರ ಮುಖಂಡರು ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಭಟ್ಕಳ, ಬೈಂದೂರು, ಕಾರವಾರದ ಮೀನುಗಾರ ಕಾರ್ಮಿಕರು ಮೀನುಗಾರಿಕೆಗೆ ತೆರಳಲು ಹಿಂದೇಟು ಹಾಕಿದ ಪರಿಣಾಮ ಯಾವುದೇ ಬೋಟುಗಳು ಸಮುದ್ರಕ್ಕೆ ಇಳಿದಿರಲಿಲ್ಲ. ಕೇವಲ ತಮಿಳುನಾಡು ಕಾರ್ಮಿಕರನ್ನೊಳಗೊಂಡ ಬೋಟುಗಳು ವಾತ್ರ ಮೀನುಗಾರಿಕೆ ನಡೆಸುತ್ತಿತ್ತು.

ಇದೀಗ ಭಟ್ಕಳ, ಬೈಂದೂರು, ಹೊನ್ನಾವರ, ಕಾರವಾರದ ಮೀನುಗಾರ ಕಾರ್ಮಿಕರು ಮಲ್ಪೆಗೆ ಆಗಮಿಸಿದ್ದು, ಮೀನುಗಾರಿಕೆಗೆ ಹೊರಡಲು ಸಿದ್ಧರಾಗಿ ದ್ದಾರೆ. ಹಾಗೆ ಇಂದು ರಾತ್ರಿಯಿಂದ ಸುಮಾರು 150 ಬೋಟುಗಳು ಮೀನು ಗಾರಿಕೆಗೆ ಹೊರಡಲಿದ್ದು, ಎರಡು ಮೂರು ದಿನಗಳ ಕಾಲ ನಾಪತ್ತೆಯಾದ ಬೋಟಿಗಾಗಿ ಹುಡುಕಾಟ ನಡೆಸಲಿವೆ. ನಂತರ ಆ ಬೋಟುಗಳು ಮೀನು ಗಾರಿಕೆ ಮುಂದುವರೆಸಲಿವೆ. ಹೀಗೆ ಇಂದಿನಿಂದ ಪ್ರತಿದಿನ ಬೋಟುಗಳು ಸಮುದ್ರಕ್ಕೆ ಇಳಿಯ ಲಿವೆ ಎಂದು ಮಲ್ಪೆ ಮೀನುಗಾರ ಸಂಘದ ಅ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.

ಪ್ರತ್ಯೇಕ ಸಮಿತಿಯಿಂದ ಸಭೆ: ಬೋಟು ಸಹಿತ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ಮೀನುಗಾರರ ವಿವಿಧ ಸಂಘಟನೆಗಳ 25 ಮಂದಿ ಪದಾಧಿಕಾರಿಗಳ ಪ್ರತ್ಯೇಕ ಸಮಿತಿಯ ಸಭೆಯು ಶನಿವಾರ ಮಲ್ಪೆ ಮೀನುಗಾರ ಸಮುದಾಯ ಭವನದಲ್ಲಿ ಜರಗಿತು.

ಪ್ರತಿಭಟನೆಯಲ್ಲಿ ನಾಪತ್ತೆಯಾದವರನ್ನು ವಾರದೊಳಗೆ ಪತ್ತೆ ಹಚ್ಚುವಂತೆ ಗಡುವು ವಿಧಿಸಿದ್ದರೂ ಕಾರ್ಯಾಚರಣೆಯಲ್ಲಿ ಈವರೆಗೆ ಯಾವುದೆ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಮೀನುಗಾರರ ಮುಂದಿನ ಹೋರಾಟದ ನಿಲುವಿನ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಮೀನುಗಾರರನ್ನು ಹುಡುಕಲು ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಹೊರಟ ತಂಡ, ಇಸ್ರೋಗೆ ಮಾಹಿತಿ ನೀಡಿರುವ ಕುರಿತು, ಮಹಾರಾಷ್ಟ್ರ, ಗೋವಾ ಗೃಹ ಸಚಿವರೊಂದಿಗೆ ಸಭೆ ನಡೆಸುವ ಕುರಿತ ರಾಜ್ಯ ಗೃಹ ಸಚಿವ ಭರವಸೆ ಬಗ್ಗೆ ಚರ್ಚಿಸಲಾಯಿತು.

ಅಂತಿಮವಾಗಿ ಗೃಹ ಸಚಿವರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕುರಿತು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಸಭೆಯಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಕಾರ್ಯದರ್ಶಿ ಗೋಪಾಲ ಆರ್.ಕೆ., ಮುಖಂಡರಾದ ನಾಗರಾಜ್ ಸುವರ್ಣ, ಸೋಮನಾಥ್ ಕಾಂಚನ್, ರಮೇಶ್ ಕೊಟ್ಯಾನ್, ರಾಮಚಂದ್ರ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

ಮಲ್ದಿ ದ್ವೀಪದಲ್ಲಿ ವಿಶೇಷ ಪೂಜೆ
ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಬರುವಂತೆ ಮಲ್ಪೆ ತಾಂಡೇಲರು ಮಲ್ಪೆ ಬಂದರಿನಿಂದ ಸೈಂಟ್ ಮೇರಿಸ್ ದ್ವೀಪದ ಮಧ್ಯಭಾಗದ ಸಮುದ್ರದಲ್ಲಿರುವ ಮಲ್ದಿ ದ್ವೀಪದಲ್ಲಿ ವಿಶೇಷ ಪೂಜೆಯನ್ನು ನಡೆಸಿದರು.

ದ್ವೀಪದಲ್ಲಿರುವ ಪ್ರಾಕೃತಿಕವಾದ ದೇವರ ಗುಡಿಯಲ್ಲಿ ಹತ್ತು ಸಮಸ್ತರ ಸಮ್ಮಖದಲ್ಲಿ ವಿಶೇಷ ಪೂಜೆ ನೆರವೇರಿಸಿ, ನಾಪತ್ತೆಯಾದ ಎಲ್ಲ ಮೀನುಗಾರರು ಶೀಘ್ರವೇ ಸುರಕ್ಷಿತವಾಗಿ ವುನೆ ಸೇರುವಂತೆ ಪ್ರಾರ್ಥಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News