2ನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಸುಬೇದಾರ್ ರುಕ್ಮಯ್ಯ ಬಂಗೇರಾ ನಿಧನ

Update: 2019-01-12 16:25 GMT

ಮಂಗಳೂರು, ಜ.12: ಸೇನೆಯಲ್ಲಿ ಮುಖ್ಯ ಸುಬೇದಾರ್ ಆಗಿ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿ ಬಳಿಕ ನಿವೃತ್ತರಾದ ಜಪ್ಪು ಬಪ್ಪಾಲ್ ನಿವಾಸಿ ರುಕ್ಮಯ್ಯ ಬಂಗೇರಾ (98) ಅವರು ಎಡಪದವಿನ ಪುತ್ರನ ಮನೆಯಲ್ಲಿ ಶನಿವಾರ ನಿಧನರಾದರು.

ಅವರಿಗೆ ಕೆಪಿಸಿಸಿ ಸದಸ್ಯ ಆರ್.ಕೆ. ಪೃಥ್ವಿರಾಜ್ ಎಡಪದವು ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

37 ವರ್ಷ ಸೇವೆ: ಸೇನೆಯಲ್ಲಿ 37ವರ್ಷ ಸೇವೆ ಸಲ್ಲಿಸಿದ ಇವರು, ದ್ವಿತೀಯ ಮಹಾಯುದ್ಧ ಮಾತ್ರವಲ್ಲದೆ ಹೈದ್ರಾಬಾದ್ ಮತ್ತು ಗೋವಾ ವಿಮೋಚನೆಯಲ್ಲಿ ಭಾಗವಹಿಸಿದ್ದರು. ರುಕ್ಮಯ್ಯ ಬಂಗೇರಾ ಅವರ ಸೇವೆಯನ್ನು ಗುರುತಿಸಿದ್ದ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್‌ ಚಹಾಕೂಟಕ್ಕೆ ತಮ್ಮ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ, ಗೌರವಿಸಿದ್ದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಜಿಪಂ ಸದಸ್ಯರಾದ ಜನಾರ್ದನ ಗೌಡ, ಯು.ಪಿ. ಇಬ್ರಾಹೀಂ, ತಾಪಂ ಸದಸ್ಯರಾದ ಸಚಿನ್ ಅಡಪ, ನಾಗೇಶ್ ಶೆಟ್ಟಿ, ಅಪ್ಸತ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮೃತರ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News