​ಫಾದರ್ ಮುಲ್ಲಾರ್ ನರ್ಸಿಂಗ್ ಸ್ಕೂಲ್, ಕಾಲೇಜಿನ ವಾರ್ಷಿಕ ಕ್ರೀಡಾಕೂಟ ‘ ಇಗ್ನೈಟ್ 2 ಕೆ 19’ ಚಾಲನೆ

Update: 2019-01-12 16:45 GMT

ಮಂಗಳೂರು, ಜ.12: ಫಾದರ್ ಮುಲ್ಲಾರ್ ನರ್ಸಿಂಗ್ ಶಾಲೆ ಮತ್ತು ಕಾಲೇಜಿನ ವಾರ್ಷಿಕ ಕ್ರೀಡಾಕೂಟ ‘ ಇಗ್ನೈಟ್ 2 ಕೆ 19’ನ್ನು ನ್ಯಾಷನಲ್ ಸಬ್ ಜೂನಿಯರ್ ಪವರ್ ಲಿಪ್ಟರ್ ವೆನಿಝಿಯಾ ಅನ್ನೆ ಕಾರ್ಲೊ ಫಾದರ್ ಮುಲ್ಲಾರ್ ಕ್ರೀಡಾಂಗಣದಲ್ಲಿಂದು ಉದ್ಘಾಟಿಸಿದರು.

ಕಾಲೇಜು ಜೀವನದಲ್ಲಿ ಕ್ರೀಡಾಚಟುವಟಿಕೆ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಪಠ್ಯಚಟುವಟಿಕೆಗಳ ಜೊತೆ ಪಠ್ಯೇತರ ವಟುವಟಿಕೆಗಳಲ್ಲಿ ಭಾಗವಹಿಸು ವುದರಿಂದ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ವೆನಿಝಿಯಾ ಅನ್ನೆಕಾರ್ಲೊ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಫ್‌ಎಂಸಿಐ ನಿರ್ದೇಶಕ ವಂ.ರಿಚರ್ಡ್ ಅಲೋಸಿಯಸ್ ಕೊಯಿಲ್ಲೊ ಮಾತನಾಡುತ್ತಾ, ಮಾನಸಿಕ ಒತ್ತಡ ನಿವಾರಿಸಲು ಕ್ರೀಡಾಚಟುವಟಿಕೆ ಸಹಕಾರಿ ಎಂದು ಶುಭಹಾರೈಸಿದರು.

ವಿನಿತಾ ಡಿ ಸೋಜ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿಜಯ ಒಲಿವೆರಾ ಕಾಲೇಜ್‌ಬ್ಯಾಂಡ್ ನೇತೃತ್ವವಹಿಸಿದ್ದರು. ಫಾದರ್ ಮುಲ್ಲಾರ್ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ವಿಕ್ಟೋರಿಯಾ ಡಿ ಅಲ್ಮೇಡಾ, ಫಾದರ್ ಮುಲ್ಲಾರ್ ನರ್ಸಿಂಗ್ ಸ್ಕೂಲ್‌ನ ಪ್ರಾಂಶುಪಾಲ ಜಾಸ್ಮಿನಾ ಸರಿಟಾ ವಾಸ್, ದೈಹಿಕ ಶಿಕ್ಷಣ ನಿರ್ದೇಶಕಿ ಸುಶ್ಮಾ, ಜಮುನಾ, ಚಂದ್ರಶೇಖರ, ಕ್ರೀಡಾ ಸಮಿತಿ ಸಂಚಾಲಕ ಕುರಿಯಕೋಸ್ ಮೊದಲಾದವರು ಉಪಸ್ಥಿತರಿದ್ದರು. ಝೀನಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಲ್ಯಾಕ್ವಿಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News