ಅಂತರಂಗದ ಭಾವ ಪ್ರಕಟಿಸುವ ಕನ್ನಡವನ್ನು ಉಳಿಸಿ: ಡಾ.ತಾಳ್ತಜೆ

Update: 2019-01-14 14:18 GMT

ಬೆಳ್ಮಣ್, ಜ.14: ಯಾವುದೇ ಭಾಷೆಯಲ್ಲಿ ಕಲಿತರೂ ಕನ್ನಡ ಭಾಷೆಯನ್ನು ಮಾತ್ರ ಮರೆಯಬಾರದು. ಅಂತರಂಗದ ಭಾವವನ್ನು ಪ್ರಕಟಿಸಲು ನಮಗೆ ಬೇಕಾಗುವುದು ಮಾತೃ ಭಾಷೆಯಾಗಿರುವ ಕನ್ನಡ. ಇಂತಹ ಕನ್ನಡವನ್ನು ಉಳಿ ಸುವ ಬಗ್ಗೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ ಎಂದು ಮುಂಬೈ ವಿಶ್ವ ವಿದ್ಯಾನಿಲಯದ ವಿಶ್ರಾಂತ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಪರಿಷತ್ ಆಶ್ರಯದಲ್ಲಿ ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಳದ ನಾನಾ ಪಾಟೇಕರ್ ಸಭಾಂಗಣದ ನಂದಳಿಕೆ ವರಕವಿ ಮುದ್ದಣ ವೇದಿಕೆಯಲ್ಲಿ ಸೋಮವಾರ ಜರಗಿದ ಉಡುಪಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ನಾವು ಇಂದು ಬಹುಭಾಷಾ ವಲಯದಲ್ಲಿದ್ದೇವೆ. ಕನ್ನಡನಾಡು ಎಲ್ಲಾ ಧರ್ಮಗಳ ನೆಲೆಯಾಗಿದೆ. ವಲಸಿಗರಿಗೂ ಆಶ್ರಯ ನೀಡಿದ ನಾಡು ನಮ್ಮದು. ಕನ್ನಡ ಪರಂಪರೆಗೆ ಯುವ ಜನತೆ ಹೊಂದಿಕೊಳ್ಳಬೇಕಾದ ಅಗತ್ಯ ಇದೆ. ಎಳೆಯರಲ್ಲಿಯೂ ಕನ್ನಡದ ಹುಮ್ಮನಸ್ಸು ಹರಡಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಮಾಜಿ ಶಾಸಕ ಗೋಪಲ ಭಂಡಾರಿ ಮಾತನಾಡಿ, ಸಮಾಜದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತವೆ. ಇಂದು ಸಮಾಜ ದಲ್ಲಿ ಅಸ್ಪಶ್ಯತೆ ಮತ್ತು ಹಸಿವು ಕಡಿಮೆಯಾಗಿದೆ. ಶಿಕ್ಷಣ ವೌಲ್ಯ ಎತ್ತರಕ್ಕೆ ಏರಿ ದರೂ ಮಾನವೀಯತೆಯ ವೌಲ್ಯಗಳು ಕುಸಿಯುತ್ತಿವೆ. ಬಲಿಷ್ಠ ಭಾರತ ನಿರ್ಮಾಣ ಕೇವಲ ಘೋಷಣೆ, ಭಾಷಣಗಳಿಂದ ಸಾಧ್ಯವಿಲ್ಲ. ಅದರ ಬದಲು ಬಲಿಷ್ಠ ಮಾಜವನ್ನು ಕಟ್ಟಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಜಿ.ಎಸ್.ಚಂದ್ರಶೇಖರ(ವೈದ್ಯಕೀಯ), ಮುದ್ರಾಡಿ ದಿವಾಕರ ಶೆಟ್ಟಿ(ಶಿಕ್ಷಣ), ಕೇಂಜ ಶ್ರೀಧರ ತಂತ್ರಿ(ಆಗಮ), ಹೆರಂಜಾಲು ಗೋಪಾಲಕೃಷ್ಣ ಗಾಣಿಗ(ಯಕ್ಷಗಾನ), ಮಂಜುನಾಥ ಶೇಟ್(ಧಾರ್ಮಿಕ), ಪೂರ್ಣಿಮಾ ಸಾಯಿನಾಥ ಶೆಟ್ಟಿ(ಉದ್ಯಮ), ಸಚ್ಚರಪರಾರಿ ಸುಬೋದ್ ಶೆಟ್ಟಿ(ಕೃಷಿ), ಮುಂಡ್ಕೂರು ಪ್ರೇಮನಾಥ ಶೆಟ್ಟಿ(ಹೊರನಾಡ ಕನ್ನಡಿಗ), ಶೇಖರ ಅಜೆಕಾರು(ಪತ್ರಿಕೋದ್ಯಮ), ಮುಂಡ್ಕೂರು ಅವಿಲ್ ಡಿಸೋಜ(ಸಮಾಜ ಸೇವೆ), ಶಿರ್ವ ದೇವದಾಸ ಪಾಟ್ಕರ್(ರಕ್ತದಾನ) ಹಾಗೂ ಮುಂಡ್ಕೂರು ಆಶ್ರಯ ಚಾರಿಟೇಬಲ್ ಟ್ರಸ್ಟ್ ಮತ್ತು ಅಬ್ಬನಡ್ಕ ಶ್ರೀದುರ್ಗಾ ಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ಗಳನ್ನು ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿ ದ್ದರು. ಸಮ್ಮೇಳನಾಧ್ಯಕ್ಷ ಡಾ.ಬಿ.ಜನಾರ್ದನ್ ಭಟ್ ಪ್ರತಿಸ್ಪಂದನೆಯನ್ನು ನೀಡಿದರು. ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಹಾಬಲ ಜಿ.ಕರ್ಕೆರ, ನಂದಳಿಕೆ ಸುಹಾಸ್ ಹೆಗ್ಡೆ, ಕಾರ್ಕಳ ತಾಪಂ ಉಪಾಧ್ಯಕ್ಷ ಗೋಪಾಲ ಮೂಲ್ಯ, ಜಿಪಂ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮುಖ್ಯ ಅತಿಥಿಗಳಾಗಿದ್ದರು.

ಉಡುಪಿ ತಾಲೂಕು ಕಸಾಪ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ನಾರಾಯಣ ಮಡಿ, ಕಾಪು ಅಧ್ಯಕ್ಷ ಪುಂಡಲೀಕ ಮರಾಠೆ, ಹೆಬ್ರಿ ಅಧ್ಯಕ್ಷ ಆನಂದ ಸಾಲಿಗ್ರಾಮ, ಪಲಿಮಾರು ಶಾಲಾ ಮುಖ್ಯ ಶಿಕ್ಷಕಿ ಗ್ರೆಟ್ಟಾ ಮೊರಾಸ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಕಾಶ್ ಇನ್ನಾ, ಭಾಸ್ಕರ್ ಶೆಟ್ಟಿ ಮುಂಡ್ಕೂರು, ಅಶೋಕ್ ಶೆಟ್ಟಿ, ಬಿ. ಜಿನ್ನಪ್ಪ ಪೂಜಾರಿ, ಮುಂಡ್ಕೂರು ವಿದ್ಯಾವರ್ಧಕ ಪ್ರೌಡ ಶಾಲಾ ಮುಖ್ಯ ಶಿಕ್ಷಕಿ ಸವಿತಾ, ಮುಂಡ್ಕೂರು ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮ ಭಟ್, ಪೊಸ್ರಾಲು ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ, ವಂದಿಸಿದರು. ಶರತ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News