×
Ad

ಕಾಲೇಜುಗಳಲ್ಲಿ ಮಕ್ಕಳ ರಂಗಭೂಮಿ ಬೆಳೆಸಿ: ಡಾ.ಶರಬೇಂದ್ರ ಸ್ವಾಮಿ

Update: 2019-01-14 19:50 IST

ಉಡುಪಿ, ಜ.14: ಮಕ್ಕಳ ನಾಟಕವನ್ನು ಪೋಷಿಸಿದರೆ ಮುಂದೆ ದೊಡ್ಡ ಹೆಮ್ಮಾರವಾಗಿ ರಂಗಭೂಮಿಗೆ ಆಶ್ರಯವಾಗುತ್ತದೆ. ಆದುದರಿಂದ ಕಾಲೇಜು ಗಳಲ್ಲಿ ಮಕ್ಕಳ ರಂಗಭೂಮಿಯನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ.ಬಿ.ಎಂ.ಶರಬೇಂದ್ರ ಸ್ವಾಮಿ ಹೇಳಿದ್ದಾರೆ.

ಉಡುಪಿ ರಂಗಭೂಮಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಇಂದು ನಡೆದ ಮೂರು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ನಾಟಕಗಳಲ್ಲಿ ಹಾಸ್ಯ ಎಂಬುದು ಇರಬೇಕು. ಆದರೆ ಹಾಸ್ಯದ ಭಾಷೆಯು ಕೆಳಮಟ್ಟಕ್ಕೆ ಇಳಿಯಬಾರದು. ಸತ್ವಯುತ ನಾಟಕಗಳು ರೂಪುಗೊಳ್ಳಬೇಕಾದರೆ ಅದರ ಮೂಲಬೇರಾಗಿರುವ ಮಕ್ಕಳ ರಂಗಭೂಮಿಯನ್ನು ಬೆಳೆಸಬೇಕಾಗಿದೆ. ಮುಂದಿನ ಪೀಳಿಗೆಯನ್ನು ಮೇಲಕ್ಕೆತ್ತುವ ಕೆಲಸವನ್ನು ಕಾಲೇಜು ಹಾಗೂ ಮಕ್ಕಳ ರಂಗಭೂಮಿ ಮಾಡುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ರಂಗ ನಿರ್ದೇಶಕ ಜೀವನ್‌ರಾಮ್ ಸುಳ್ಯ ಮಾತ ನಾಡಿ, ಇಂದು ರಂಗಭೂಮಿ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತಿದೆ. ಕಲಾವಿದರು ಪಕ್ವಗೊಳ್ಳಲು ರಂಗಭೂಮಿಯು ಮುಖ್ಯ ವೇದಿಕೆಯಾಗುತ್ತಿದೆ ಎಂದು ಅಭಿ ಪ್ರಾಯ ಪಟ್ಟರು.

ವೇದಿಕೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್, ರಂಗ ಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್, ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.

ಮೇಟಿ ಮುದಿಯಪ್ಪ ಸ್ವಾಗತಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿ ಯಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಭೂಮಿ ಮಕ್ಕಳ ತಂಡ ದಿಂದ ‘ಮಾರಿಕಳೆ’ ಹಾಗೂ ಮಂಗಳೂರು ಆಕರಂ ಸಂತ ಆಗ್ನೇಸ್ ಕನ್ನಡ ರಂಗಭೂಮಿ ತಂಡದಿಂದ ‘ನಿನಗೆ ನೀನೆ ಗೆಳತಿ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News