×
Ad

ಉಡುಪಿ: ಭಿಕ್ಷಾಟನೆ ನಿರತ ಬಾಲಕಿಯ ರಕ್ಷಣೆ

Update: 2019-01-14 20:01 IST

ಉಡುಪಿ, ಜ.14: ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿಯ ಸಿಟಿ ಬಸ್‌ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಮತ್ತು ಶ್ರೀಕೃಷ್ಣ ಮಠದ ಆಸುಪಾಸುಗಳಲ್ಲಿ ಭಿಕ್ಷಾಟನೆ ಮಾಡದಂತೆ ಅರಿವು ಮೂಡಿಸಲಾಗಿದ್ದು, ಸೋಮವಾರ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಭಿಕ್ಷಾಟನೆ ನಿರತ ಬಾಲಕಿಯೊಬ್ಬಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಬಾಕರ್ ಆಚಾರ್, ಕಾನೂನು ಪರಿವೀಕ್ಷಣಾಧಿಕಾರಿ ಕಪಿಲಾ ಬಿ., ರಕ್ಷಣಾಧಿಕಾರಿ (ಸಾಂಸ್ಥಿಕ) ಯೋಗೀಶ್, ಸಮಾಜ ಕಾರ್ಯಕರ್ತ ಸಂದೇಶ್ ಕೆ., ಸುನಂದ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News