ಮಲ್ತಿ ದ್ವೀಪದಲ್ಲಿ ಮಕರಸಂಕ್ರಾಂತಿ ವಿಶೇಷ ಪೂಜೆ: ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ಪ್ರಾರ್ಥನೆ

Update: 2019-01-14 14:44 GMT

ಮಲ್ಪೆ, ಜ.14: ಇಲ್ಲಿಗೆ ಸಮೀಪ ಅರಬೀಸಮುದ್ರದಲ್ಲಿರುವ ನಿರ್ಜನ ಪುಟ್ಟ ಮಲ್ತಿ ದ್ವೀಪದಲ್ಲಿರುವ ಪರಾಶಕ್ತಿ ದೇವತೆಗೆ ಸೋಮವಾರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ದ್ವೀಪದಲ್ಲಿ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ದೇವಸ್ಥಾನದ ವತಿಯಿಂದ ಪೂಜೆ ಸಲ್ಲಿಸುವುದು ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಿಂದಿ ನಿಂದಲೂ ಈ ಶಕ್ತಿ ದೇವತೆ ಇದ್ದರೂ ಕಾಲಾಂತರದಲ್ಲಿ ಪೂಜಾ ಕ್ರಮ ನಿಂತು ಹೋಗಿತ್ತು. ಕಳೆದ ಕೆಲವು ವರ್ಷಗಳಿಂದ ಕೊಡವೂರು ದೇವ್ಥಾನದಿಂದ ಪೂಜೆ ಸಲ್ಲಿಕೆಯಾಗುತ್ತಿದೆ.

ಈ ದ್ವೀಪದಲ್ಲಿ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ದೇವಸ್ಥಾನದ ವತಿಯಿಂದ ಪೂಜೆ ಸಲ್ಲಿಸುವುದು ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಿಂದಿ ನಿಂದಲೂ ಈ ಶಕ್ತಿ ದೇವತೆ ಇದ್ದರೂ ಕಾಲಾಂತರದಲ್ಲಿ ಪೂಜಾ ಕ್ರಮ ನಿಂತು ಹೋಗಿತ್ತು. ಕಳೆದ ಕೆಲವು ವರ್ಷಗಳಿಂದ ಕೊಡವೂರು ದೇವಸ್ಥಾನದಿಂದ ಪೂಜೆ ಸಲ್ಲಿಕೆಯಾಗುತ್ತಿದೆ. ಪೂಜಾ ವಿಧಿವಿಧಾನಗಳನ್ನು ದೇವಳದ ತಂತ್ರಿಗಳಾದ ಹಯವದನ ತಂತ್ರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮೀನುಗಾರಿಕೆಗೆಂದು ತೆರಳಿ ಬೋಟಿ ನೊಂದಿಗೆ ನಾಪತ್ತೆಯಾದ ಏಳು ಮಂದಿ ಮೀನುಗಾರು ಶೀಘ್ರವಾಗಿ ಮರಳಿ ಬರುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಆ ಬಳಿಕ ಸಮುದ್ರ ಪೂಜೆ ನೆರವೇರಿತು.

ಪೂಜಾ ವಿಧಿವಿಾನಗಳನ್ನುದೇವಳದತಂತ್ರಿಗಳಾದಹಯವದನತಂತ್ರಿನೆರವೇರಿಸಿದರು.ಈಸಂದರ್ದಲ್ಲಿ ಮೀನುಗಾರಿಕೆಗೆಂದು ತೆರಳಿ ಬೋಟಿ ನೊಂದಿಗೆ ನಾಪತ್ತೆಯಾದ ಏಳು ಮಂದಿ ಮೀನುಗಾರು ಶೀಘ್ರವಾಗಿ ಮರಳಿ ಬರುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಆ ಬಳಿಕ ಸಮುದ್ರ ಪೂಜೆ ನೆರವೇರಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ರಾಜು ಶೇರಿಗಾರ್, ಸುಧಾ ಎನ್ ಶೆಟ್ಟಿ, ಬೇಬಿ ಮೆಂಡನ್, ಚಂದ್ರಕಾಂತ್, ಸೇವಾ ಸಮಿತಿಯ ಭಾಸ್ಕರ್ ಭಟ್, ಗೋವಿಂದ ಐತಾಳ್, ಶ್ಯಾಮಸುಂದರ್ ಭಟ್, ಮೀನುಗಾರ ಮುಖಂಡರಾದ ರವಿರಾಜ ಸುವರ್ಣ, ಹರೀಶ್ ಕೋಟ್ಯಾನ್, ಸತೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News