×
Ad

ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ ಕಂಬಳ

Update: 2019-01-14 20:33 IST

ಮಂಗಳೂರು, ಜ.14: ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ ತಲಪಾಡಿ ದೊಡ್ಡಮನೆ ಕ್ಯಾ.ಬೃಜೇಶ್ ಚೌಟ ಸಾರಥ್ಯದಲ್ಲಿ 2ನೇ ವರ್ಷ ಆಯೋಜಿಸಲ್ಪಟ್ಟ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ 101ಕ್ಕೂ ಅಧಿಕ ಕಂಬಳ ಕೋಣಗಳ ಜೋಡಿಗಳು ಅವಿಭಜಿತ ದ.ಕ. ಜಿಲ್ಲೆಯ ವಿವಿಧೆಡೆಯಿಂದ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದವು. ರಾಮ-ಲಕ್ಷ್ಮಣ ಜೋಡುಕರೆ ಕಂಬಳದ ಫಲಿತಾಂಶವನ್ನು ಸೋಮವಾರ ಪ್ರಕಟಸಿದೆ.

ಕನೆಹಲಗೆ: ಬಾರ್ಕೂರು ಶಾಂತಾರಾಮ ಶೆಟ್ಟಿ (6.5 ಕೋಲು ನಿಶಾನಿಗೆ ನೀರು ಹಾಯಿಸಿದೆ); ಓಡಿಸಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ.
ಹಗ್ಗ ಹಿರಿಯ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ (ಬಿ) (ಪ್ರಥಮ); ಓಡಿಸಿದವರು: ಬಜೆಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. ಮೂಡುಬಿದಿರೆ ನ್ಯೂ ಪಡಿವಾಲ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಲ್ (ಬಿ)(ದ್ವಿತೀಯ); ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ.

ಹಗ್ಗ ಕಿರಿಯ:  ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ (ಪ್ರಥಮ); ಓಡಿಸಿದವರು: ಪಣಪೀಲು ಪ್ರವೀಣ್ ಕೋಟ್ಯಾನ್, ಮೂಡುಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್(ದ್ವಿತೀಯ); ಓಡಿಸಿದವರು : ಕೊಳಕೆ ಇರ್ವತ್ತೂರು ಆನಂದ.
ನೇಗಿಲು ಹಿರಿಯ:  ಬೋಳದ ಗುತ್ತು ಜಗದೀಶ್ ಶೆಟ್ಟಿ (ಬಿ) ಪ್ರಥಮ; ಓಡಿಸಿದವರು: ಮರೋಡಿ ಶ್ರೀಧರ್, ಕೌಡೂರು ಬೀಡು ತುಷಾರ ಮಾರಪ್ಪ ಭಂಡಾರಿ ಬಿ.(ದ್ವಿತೀಯ); ಓಡಿಸಿದವರು: ಅಳದಂಗಡಿ ರವಿಕುಮಾರ್.

ನೇಗಿಲು ಕಿರಿಯ: ಮಿಜಾರು ಪ್ರಸಾದ ನಿಲಯ ಪ್ರಸಿದ್ದ್ ಶಕ್ತಿಪ್ರಸಾದ್ ಶೆಟ್ಟಿ (ಪ್ರಥಮ); ಓಡಿಸಿದವರು: ಬಾರಾಡಿ ನತೇಶ್ ಕುಮಾರ್, ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ (ದ್ವಿತೀಯ); ಓಡಿಸಿದವರು: ಕಡಂದಲೆ ದುರ್ಗಾ ಪ್ರಸಾದ್.
ಅಡ್ಡಹಲಗೆ: ಮೋರ್ಲಾ ಜಗದೀಶ್ ಆಳ್ವ (ಪ್ರಥಮ); ಓಡಿಸಿದವರು: ಬಂಗಾಡಿ ಕುದ್ಮಾನ್ ಲೋಕಯ್ಯಗೌಡ, ಬೋಳಾರ ತ್ರಿಶಾಲ್ ಕೆ.ಪೂಜಾರಿ(ದ್ವಿತೀಯ); ಓಡಿಸಿದವರು: ಮಂದಾರ್ತಿ ಶಿರೂರು ಗೋಪಾಲನಾಯ್ಕ.

ತುಳು ಸಂಸ್ಕೃತಿ ಉಳಿವಿಗೆ ಕಂಬಳ ಕ್ರೀಡೆ ಅಗತ್ಯ: ಕೃಷ್ಣ ಜೆ.ಪಾಲೆಮಾರ್

ಕಂಬಳದಂತಹ ಜಾನಪದ ಕ್ರೀಡೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ನಿರಂತರವಾಗಿ ನಡೆಯಬೇಕು. ಜತೆಗೆ ತುಳುನಾಡಿನ ಸಂಸ್ಕೃತಿ-ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗಲು ಕಂಬಳ ಕ್ರಿಡೆ ಅಗತ್ಯಗತ್ಯ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದರು.

ನಗರದ ಬಂಗ್ರ ಕೂಳೂರು ಗೋಲ್ಡ್‌ಫಿಂಚ್ ಸಿಟಿ ಮೈದಾನದಲ್ಲಿ ರವಿವಾರ ಆಯೋಜನೆಗೊಂಡ ರಾಮ-ಲಕ್ಷ್ಮಣ ಜೋಡುಕರೆ ಕಂಬಳದ ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಕಂಬಳದ ಮೂಲಕ ತುಳುನಾಡಿನ ಸಂಸ್ಕೃತಿ ಉಳಿಸುವ ಪ್ರಯತ್ನ ಶ್ಲಾಘನೀಯ. ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮದ ಅಗತ್ಯವಾಗಿದ್ದು, ಮಂಗಳೂರನ್ನು ಬ್ರಾಂಡ್ ಮಾಡಲೂ ಸಹಕಾರಿಯಾಗಿದೆ ಎಂದು ಹೇಳಿದರು.

ಮಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದ, ಖ್ಯಾತ ಗಾಯಕ ರಘು ದೀಕ್ಷಿತ್, ವಿಎಚ್‌ಪಿ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಅಜೇಯ ಟ್ರಸ್ಟ್ ಮೂರ್ಕಜೆ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ದ.ಕ. ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ದ.ಕ.ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ಸ್ವಾಗತಿಸಿದರು. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News