×
Ad

ಜ.16-17: ರಾಷ್ಟ್ರೀಯ ಮಟ್ಟದ ಫಿಲ್ಮ್ ಮತ್ತು ಮೀಡಿಯ ಫೆಸ್ಟ್

Update: 2019-01-14 22:21 IST

ಮಂಗಳೂರು, ಜ.14: ನಗರದ ಸಂತ ಅಲೋಶಿಯಸ್ ಕಾಲೇಜಿನ ಜರ್ನಲಿಸಂ ವಿಭಾಗವು ಜ.16ಮತ್ತು 17ರಂದು ಶೂಟಿಂಗ್ ಸ್ಟಾರ್ಸ್ ಬಗ್ಗೆ ರಾಷ್ಟ್ರೀಯ ಮಟ್ಟದ ಚಲನಚಿತ್ರ ಮತ್ತು ಮಾಧ್ಯಮ ಹಬ್ಬವನ್ನು ಕಾಲೇಜಿನ ಎಲ್.ಎಫ್. ರಸ್ಕೀನ್ಹಾ ಹಾಲ್‌ನಲ್ಲಿ ಆಯೋಜಿಸಿದೆ.

ನಟ ಮತ್ತು ನಿರ್ದೇಶಕ ಪ್ರತಾಪ್ ಕೆ. ಪೊತನ್, ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರೆ.ಫಾ. ಡಯನೀಶಿಯಸ್ ವಾಜ್ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಡೂಡಲ್ ಆರ್ಟ, ಮಿನಿಮಲ್ ಪೋಸ್ಟರ್ ಮೇಕಿಂಗ್, ಮೂವಿ ಸ್ಫೂಫ್, ಮೂವೀ ಎನಾಲಿಸಿಸ್, ಆರ್.ಜೆ. ಹಂಟ್, ಮೂವೀ ಕ್ವಿಝ್, ಜಸ್ಟ್-ಎ-ಮಿನಿಟ್, ಮೊಕ್ ಸೆಲೆಬ್ರಿಟಿ ಪ್ರೆಸ್, ಸ್ಟೋರಿ ಟೆಲ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಜ.17ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ಆದರ್ಶ್ ಎಚ್. ಈಶ್ವರಪ್ಪ, ಆಡಳಿತ ಬ್ಲಾಕ್‌ನ ನಿರ್ದೇಶಕ ಡಾ.ಆಲ್ವಿನ್ ಡೇಸಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News