ನವಯುಗ ವಿರುದ್ಧ ಪ್ರತಿಭಟನೆ: ಉಪವಾಸ ಸತ್ಯಾಗ್ರಹ ಆರಂಭ

Update: 2019-01-14 17:50 GMT

ಪಡುಬಿದ್ರಿ, ಜ. 14: ಸ್ಥಳೀಯ ವಾಹಗಳಿಗೆ ಹೆಜಮಾಡಿ ಟೋಲ್‍ನಲ್ಲಿ ಟೋಲ್ ವಸೂಲಿ ಮಾಡಬಾರದು ಹಾಗೂ ನವಯುಗ ಕಂಪೆನಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾಪು ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಳೆದ ವಾರ ಆರಂಭಗೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿದೆ. 

ಉಪವಾಸ ಸತ್ಯಾಗ್ರಹ: ಇದೇ ವೇಳೆ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ಕರವಾ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಕಾಪು ಘಟಕದ ಅಧ್ಯಕ್ಷ ಸಯ್ಯದ್ ನಿಝಮುದ್ದೀನ್, ರಝಾಕ್ ಕಂಚಿನಡ್ಕ ಸೋಮವಾರ ಬೆಳಗ್ಗೆ 10ಗಂಟೆಯಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಸತತ 100 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಯಲಿದೆ.

ಬೆಂಬಲ: ಪ್ರತಿಭಟನೆಗೆ ಪಡುಬಿದ್ರಿ ವಲಯದ 20ತಂಡಗಳ ಆಟಗಾರರು ಸೋಮವಾರ ಭಾಗವಹಿಸಿದರು. ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಟೋಲ್‍ನಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಟೋಲ್ ವಸೂಲಿಯನ್ನು ತಕ್ಷಣದಿಂದ ನಿಲ್ಲಿಸಬೇಕು. ಇಲ್ಲದೇ ಇದ್ದಲ್ಲಿ ಪ್ರತಿಭಟನೆಗೆ ಎಲ್ಲಾ ಆಟಗಾರರು ಬೆಂಬಲ ಸೂಚಿಸಿ ಯಾವುದೇ ಹೋರಾಟಕ್ಕೂ ಸಿದ್ಧವಿರುವುದಾಗಿ ಹೇಳಿದರು. 

ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ನವೀನ್‍ಚಂದ್ರ ಜೆ.ಶೆಟ್ಟಿ, ಎಂ.ಪಿ.ಮೊಯಿದಿನಬ್ಬ, ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಹಸನ್ ಬಾವಾ, ಕರುಣಾಕರ ಪೂಜಾರಿ, ಆಸೀಫ್ ಆಪದ್ಬಾಂಧವ, ಕರವೇ ಜಿಲ್ಲಾ ಸಮಿತಿಯ ದಿಲ್ಲೇಶ್ ಶೆಟ್ಟಿ, ಹಮೀದ್ ಯೂಸುಫ್, ಮನ್ಸೂರ್ ಇಬ್ರಾಹಿಂ, ಕಿರಣ್ ಪುತ್ರನ್, ಜಯಶ್ರೀ ಕೋಟ್ಯಾನ್, ಹುಸೈನ್ ಹೈಕಾಡಿ,  ಪ್ರಕಾಶ್ ಪಿ.ಆರ್, ಅರವಿಂದ್, ಸುನೀಲ್ ಶೆಟ್ಟಿ, ಹಮೀದ್ ಹೆಜಮಾಡಿ, ರಮೀಝ್ ಹುಸೈನ್, ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News