ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಗೆ ಮಹಮ್ಮದ್ ತಪ್ಸೀರ್ ಆಯ್ಕೆ
Update: 2019-01-14 23:36 IST
ಮಂಗಳೂರು, ಜ. 14: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಮಹಮ್ಮದ್ ತಪ್ಸೀರ್ ಆಯ್ಕೆಗೊಂಡಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಮಲಬಾರ್ ಹೌಸ್ ನಲ್ಲಿ ಇತ್ತೀಚೆಗೆ ನಡೆದ ಸಂಘಟನೆಯ ರಾಷ್ಟೀಯ ಪ್ರತಿನಿಧಿಗಳ ಸಮಾವೇಶದಲ್ಲಿ ಮುಂದಿನ ರಾಷ್ಟ್ರೀಯ ಸಮಿತಿಗೆ ನೂತನ ಸಮಿತಿಯನ್ನು ಆಯ್ಕೆಮಾಡಲಾಗಿದ್ದು ಕರ್ನಾಟಕದಿಂದ ನಾಲ್ವರು ಆಯ್ಕೆಯಾಗಿದ್ದು ಅಬ್ದುಲ್ ರಹೀಂ ಬೆಂಗಳೂರು, ಕಲೀಂ ತುಮಕೂರು, ಮಿಸ್ರಿಯಾ ಪುತ್ತೂರು ಕೂಡಾ ಆಯ್ಕೆಯಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಮಹಮ್ಮದ್ ತಪ್ಸೀರ್ ದ.ಕ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗ್ರಾಮದ ನಿವಾಸಿಯಾಗಿದ್ದು ಪ್ರಸ್ತುತ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದಾರೆ.