×
Ad

ಎಸ್.ವೈ.ಎಸ್.,ಎಸ್ಸೆಸ್ಸೆಫ್ ಮೇಲಂಗಡಿ ವತಿಯಿಂದ ಮುಹಬ್ಬತೇ ಜೀಲಾನಿ ಕಾರ್ಯಕ್ರಮ

Update: 2019-01-14 23:39 IST

ಮಂಗಳೂರು, ಜ. 14: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಮತ್ತು ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಮೇಲಂಗಡಿ, ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಮಹಬ್ಬತೇ ಜೀಲಾನಿ ನಸೀಹತ್ ಸಿಲ್‍ಸಿಲಾದ ಪ್ರಯುಕ್ತ 12 ದಿನಗಳ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಮೇಲಂಗಡಿಯಲ್ಲಿ ನಡೆಯಿತು.

ಬದ್‍ರ್ ಮೌಲಿದ್, ಬೃಹತ್ ಮುರ್ದಾ ಮಜ್ಲಿಸ್, ಮುಹ್ಯದ್ದೀನ್ ಮಾಲೆ ಆಲಾಪಣೆ, ಮದನಿ ಮಾಲೆ ಆಲಾಪಣೆ, ತಾಜುಲ್ ಉಲಮಾ ಮೌಲಿದ್, ಮಹ್ಳರತುಲ್ ಬದ್ರಿಯ್ಯಾ ಮತ್ತು 2ನೇ ವಾರ್ಷಿಕ ಜಲಾಲಿಯಾ ರಾತೀಬು ಮಜ್ಲಿಸ್ ಕಾರ್ಯಕ್ರಮಕ್ಕೆ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರತ್‍, ಸಯ್ಯಿದ್ ಮದನಿ ಕಾಲೇಜ್‍ನ ಪ್ರೊ. ಶೈಖುನ ಅಹ್ಮದ್ ಬಾವಾ ಉಸ್ತಾದ್ ಚಾಲನೆ ನೀಡಿದರು.

ಎಸ್ಸೆಸ್ಸೆಫ್ ದ.ಕ. ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಉದ್ಘಾಟಿಸಿ, ಉಸ್ಮಾನ್ ಸಖಾಫಿ ಮಾರ್ಗತಲೆ ಪ್ರಾಸ್ತವಿಕ ಬಾಷಣ ಮಾಡಿದರು. ಅಸ್ಸೆಯ್ಯಿದ್ ಮುಷ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ಇವರ ನೇತೃತ್ವದಲ್ಲಿ 2ನೇ ವಾರ್ಷಿಕ ಜಲಾಲಿಯಾ ರಾತೀಬು ಜರಗಿತು. ಈ ಸಂದರ್ಭ ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲುದ್ದೀನ್ ತಂಙಳ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್‍ನ ನೂತನ ಅಧ್ಯಕ್ಷರು ಅಸ್ಸೆಯ್ಯಿದ್ ಖುಬೈಬ್ ತಂಙಳ್ ಮತ್ತು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್‍ನ ನೂತನ ಅಧ್ಯಕ್ಷರದ ಶಬೀರ್ ಪೇಟೆ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.

12 ದಿವಸದ ಕಾರ್ಯಕ್ರಮದಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಸಖಾಫಿ ಅಲ್ ಹೈದ್ರೋಸ್ ಕಿಲ್ಲೂರು, ಕೆಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಯ್ಯಿದ್ ತ್ವಾಹ ತಂಙಳ್ ಸಖಾಫಿ ಅಲ್ ಹೈದ್ರೋಸ್, ಹಾಫಿಳ್ ಅಬ್ದುಲ್ ಮಜೀದ್ ಸಖಾಫಿ ಗಾಣೆಮಾರ್, ರಾಫಿ ಅಹ್ಸನಿ ಕಾಂತಪುರಂ, ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಸದಿ ಮಳ್ಹರ್, ಪೊಸೋಟು, ಅಹ್ದಲಿ ಇಖ್ವಾನ್ ತಂಡ ಮುಹಿಮ್ಮಾತ್, ಖ್ಯಾತ ವಿದ್ವಾಂಸ ಅಬ್ದುಲ್ ಖಾದರ್ ಸಖಾಫಿ ಮುದುಗುಡ, ನೌಫಲ್ ಸಖಾಫಿ ಕಳಸ, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಸದಿ ಅಲ್ ಮಶ್ಹೂರ್, ದ.ಕ. ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ, ಆಸ್‍ಅದ್ ಸಖಾಫಿ, ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಕಾರ್ಯಕ್ರಮದ ನೇತೃತ್ವ ವಹಿಸಿದರು.

ಮುಖ್ಯ ಆಥಿತಿಗಳಾಗಿ ದ.ಕ. ಉಸ್ತುವಾರಿ ಸಚಿವ ಯು.ಟಿ. ಖಾದರ್, ಸ್ಥಳದಾನಿಯಾದ ಕರೀಂ ಹಾಜಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಅಲ್ತಾಫ್ ಕುಂಪಲ, ಮುಈನುದ್ದೀನ್ ರಝಾ ಅಮ್ಜದಿ, ನವಾಝ್ ಅಮ್ಜದಿ, ಮುಝಮ್ಮಿಲ್ ಮದನಿ ಕೋಡೆಪುರ, ಹಾಫಿಳ್ ಉವೈಸ್ ಕೋಟೆಪುರ, ಹನೀಫ್ ಹಾಜಿ, ರಶೀದ್ ಹಾಜಿ ಪಾಂಡೇಶ್ವರ, ಮುಸ್ತಫ ಮಾಸ್ಟರ್, ಶಮೀರ್ ಸೇವಂತಿಗುಡ್ಡೆ, ಇಸ್ಹಾಕ್ ಪೇಟೆ, ಕೌಸಿಲರ್ ನಿಝಾಮ್, ಝೈನುದ್ದೀನ್, ಉಪಸ್ಥಿತರಿದ್ದರು.

ಎಸ್‍ವೈಎಸ್ ಶಾಖಾಧ್ಯಕ್ಷ ಬಶೀರ್ ಸಖಾಫಿ ಸ್ವಾಗತಿಸಿ, ಬ್ರಾಂಚ್ ಕಾರ್ಯದರ್ಶಿ ಖಾದರ್ ಜೀಲಾನಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News