ಫರಂಗಿಪೇಟೆಯಲ್ಲಿ ಶಾಶ್ವತ, ಸುಸಜ್ಜಿತ ಮೀನು ಮಾರುಕಟ್ಟೆ ಅಗತ್ಯವಿದೆ: ಎಸ್.ಡಿ.ಪಿ.ಐ

Update: 2019-01-15 18:12 GMT

ಫರಂಗಿಪೇಟೆ, ಜ. 15: ಇಲ್ಲಿನ ಮೀನು ಮಾರುಕಟ್ಟೆ ಜಾಗ ರೈಲ್ವೇ ಇಲಾಖೆಗೊಳಪ್ಪಟ್ಟಿದ್ದರಿಂದ ರೈಲ್ವೇ ಇಲಾಖೆ ತೆರವು ಗೊಳಿಸಲು ಜ .15 ಅಂತಿಮ ಗಡು ವಿದಿಸಿದ್ದು ಅದರಂತೆ ಮೀನು ಮಾರುಕಟ್ಟೆಗೆ ಫರಂಗಿಪೇಟೆ ಹೆದ್ದಾರಿ ಪಕ್ಕದಲ್ಲಿ ತಾತ್ಕಾಲಿಕ ಶೆಡ್ಡ್ ನಿರ್ಮಿಸಿದ್ದು ಇದು ಪೇಟೆಯಿಂದ ಹೊರಗೆ ಇದ್ದು ಫರಂಗಿಪೇಟೆಗೆ ಒಂದು ಶಾಶ್ವತ ಮತ್ತು ಸುಸಜ್ಜಿತ ಮೀನು ಮಾರುಕಟ್ಟೆ ಅಗತ್ಯವಿದೆ ಎಂದು ಎಸ್.ಡಿ.ಪಿ.ಐ ಒತ್ತಾಯಿಸಿದೆ.

ಫರಂಗಿಪೇಟೆಯಲ್ಲಿ ಮೀನು ಮಾರುಕಟ್ಟೆ ಹಲವು ವರ್ಷದಿಂದ ಕಾರ್ಯಚರಿಸುತ್ತಿದ್ದು ಶಾಶ್ವತ ಪರಿಹಾರ ಮಾಡದ ಕಾರಣದಿಂದ ಸ್ಥಳಾಂತರವಾಗುತ್ತಲೇ ಇದೆ. ಈಗಲೂ ತಾತ್ಕಾಲಿಕ ಮೀನು ಮಾರುಕಟ್ಟೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ತೆರವುಗೊಳಿಸುವ ಅನಿವಾರ್ಯ ಬರಬಹುದು, ಆದ್ದರಿಂದ ಉಸ್ತುವಾರಿ ಸಚಿವ ಯುಟಿ ಖಾದರ್ ಮತ್ತು ಸ್ಥಳೀಯಾಡಳಿತ ಬಡ ಮೀನು ವ್ಯಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲನಾಗುವ ರೀತಿಯಲ್ಲಿ ಪೇಟೆಯಲ್ಲಿಯೇ ಶಾಶ್ವತ ವ್ಯವಸ್ಥೆ ಮಾಡಬೇಕೆಂದು ಎಸ್.ಡಿ.ಪಿ.ಐ ಮುಖಂಡ ಇಕ್ಬಾಲ್ ಅಮೆಮಾರ್ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News