ಪ್ರವಾದಿ ನಿಂದನೆ: ಕಾನೂನು ಕ್ರಮಕ್ಕೆ ಒತ್ತಾಯಿಸಿ ತುಂಬೆಯಲ್ಲಿ ಪ್ರತಿಭಟನೆ

Update: 2019-01-15 18:19 GMT

ಫರಂಗಿಪೇಟೆ, ಜ. 15: ಪ್ರವಾದಿ ನಿಂದನೆಗೈದ ಸುವರ್ಣ ಕನ್ನಡ ಸುದ್ದಿ ವಾಹಿಣಿಯ ನಿರೂಪಕ ಅಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಮೊಹಿದ್ದೀನ್ ಜುಮಾ ಮಸೀದಿ ತುಂಬೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪ್ರತಿಭಟನಾ ಧರಣಿ  ನಡೆಯಿತು.

ಈ ಸಂದರ್ಭ ಮಾತನಾಡಿದ ಮಸೀದಿ ಖತೀಬ್ ಅಬ್ದುಲ್ ಲತೀಫ್ ಪೈಝಿ ಅಜಿತ್ ದುರುದ್ದೇಶ ಪೂರಿತವಾಗಿ ಪ್ರವಾದಿಯನ್ನು ನಿಂದಿಸಿದ್ದಾನೆ, ರಾಮಕೃಷ್ಣ ಪರಮಹಂಸ ಶಾರದಾ ದೇವಿಯನ್ನು 5 ವರ್ಷದಲ್ಲಿ ಮದುವೆಯಾಗಿದ್ದಾನೆ. ಇದನ್ನು ಯಾವ ಮುಸ್ಲಿಮನೂ ಹಿಯಾಲಿಸಿಲ್ಲ ಯಾಕೆಂದರೆ ಇಸ್ಲಾಮ ಧರ್ಮವೂ ಯಾರನ್ನೂ ಯಾವ ಧರ್ಮವನ್ನು ನಿಂದಿಸಲು ಕಲಿಸಿಲ್ಲ, ಇಸ್ಲಾಮ್ ಮತ್ತು ಪ್ರವಾದಿಗಳ ಬಗ್ಗೆ ತಿಳಿಯಲು ಬೇಕಾದಷ್ಟು ಪುಸ್ತಕ, ಕೃತಿಗಳು ಇವೆ, ನಾರಾಯಣಗುರು ಪ್ರವಾದಿ ಮಹಮ್ಮದ್(ಸ)ರನ್ನು ಸಾಮಾನ್ಯ ಮನುಷ್ಯನಲ್ಲ ಎಂಬ ಗೌರವದ ಹೇಳಿಕೆ ನೀಡಿರುವುದು ಪ್ರವಾದಿವರ್ಯರ ಮೌಲ್ಯವನ್ನು ತೊರಿಸುತ್ತದೆ ಎಂದು ಹೇಳಿದರು.

ಮುಖಂಡರಾದ ಇಮ್ತಿಯಾಝ್ ಎಕೆ ಮಾತನಾಡಿ ಅಜಿತ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅದ್ದಾದಿ ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದರು, ಜಮಾತ್ ಪದಾಧಿಕಾರಿಗಳು ಸದಸ್ಯರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮೂಸಬ್ಬ ವಂದಿಸಿ, ಅಬ್ದುಲ್ ರಶೀದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News