ನೈರೋಬಿ ಯಲ್ಲಿ ಭಯೋತ್ಪಾದಕ ದಾಳಿ; 15 ಸಾವು
Update: 2019-01-16 20:26 IST
ನೈರೋಬಿ, ಜ. 16: ಕೆನ್ಯದ ರಾಜಧಾನಿ ನೈರೋಬಿಯ ಹೊಟೇಲ್ ಮತ್ತು ಕಚೇರಿ ಆವರಣದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ದಾಳಿ ಇನ್ನೂ ಮುಂದುವರಿದಿದೆ.
‘‘ಈ ಕ್ಷಣದಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ವಿದೇಶಿಯರೂ ಇದ್ದಾರೆ’’ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.