ಪಾರ್ಕ್ ಮಾಡಿದ್ದ ಕಾರು ಕಳವು: ದೂರು
Update: 2019-01-16 21:15 IST
ಮಂಗಳೂರು, ಜ.16: ನಗರದ ಮರೋಳಿ ಗ್ರಾಮದ ಪಡೀಲ್ ಬಳಿ ಪಾರ್ಕ್ ಮಾಡಿದ್ದ ಆಲ್ಟೋ ಕಾರು ಕಳವಾಗಿದ್ದು, ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಲಾರೆನ್ಸ್ ಅವರು ಬಿ.ಸಿ.ರೋಡ್‌ನಲ್ಲಿ ಸ್ವಂತ ಗ್ಯಾರೇಜ್ ಹೊಂದಿದ್ದು, ಜ.2ರಂದು ಬೆಳಗ್ಗೆ 8 ಗಂಟೆಗೆ ಕಾರು ಪಾರ್ಕಿಂಗ್ ಮಾಡಿ ಕೆಲಸಕ್ಕೆ ಹೋಗಿದ್ದರು. ಸಂಜೆ ಬಂದು ನೋಡಿದಾಗ ಕಾರು ಕಳವಾಗಿರುವುದು ಗಮನಕ್ಕೆ ಬಂದಿದೆ. ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.