ಕಾರುಗಳ ಮುಖಾಮುಖಿ ಢಿಕ್ಕಿ; ಇಬ್ಬರಿಗೆ ಗಾಯ
Update: 2019-01-16 21:17 IST
ಮಂಗಳೂರು, ಜ.16: ನಗರದ ಹೊರವಲಯ ತಣ್ಣೀರುಬಾವಿ ಸಮೀಪ ಕಾರುಗಳ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಅಶೋಕ್ ಶೆಟ್ಟಿ ಕಾರಿನಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದಾಗ ಇನ್ನೊಂದು ಕಾರು ಢಿಕ್ಕಿಯಾಗಿದೆ. ಪರಿಣಾಮ ಅಶೋಕ್ ಶೆಟ್ಟಿ ಅವರ ಎದೆ ಹಾಗೂ ಕೈಗೆ ಗುದ್ದಿದ ಗಾಯವಾಗಿದೆ. ಇನ್ನೊಂದು ಕಾರಿನಲ್ಲಿದ್ದ ಜೊಹರಾ ಅವರ ಮುಖ ಹಾಗೂ ಗಲ್ಲಕ್ಕೆ ಗಾಯವಾಗಿದೆ. ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಎರಡು ಕಾರುಗಳಿಗೂ ಹಾನಿ ಉಂಟಾಗಿದೆ. ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.