ಮಂಗಳೂರು: ಪಿಎಫ್‌ಐನಿಂದ ರಾಜ್ಯಾದ್ಯಂತ ಶಿಷ್ಯವೇತನ ವಿತರಣೆ
ಮಂಗಳೂರು, ಜ.16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ‘ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆ 2018-19’ ಇದರ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸಮಿತಿಯಿಂದ ಸ್ಕಾಲರ್‌ಶಿಪ್ ವಿತರಣಾ ಕಾರ್ಯಕ್ರಮವು ರಾಜ್ಯದ ವಿವಿಧೆಡೆ ಆಯೋಜಿಸಲಾಗಿತ್ತು.
ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಬೆಂಗಳೂರಿನಲ್ಲಿ ನಡೆದ ಸಮಾರೋಪ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ರಾಜ್ಯದ 8 ಕಡೆಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಕಾನೂನು, ಪತ್ರಿಕೋದ್ಯಮ, ವೈದ್ಯಕೀಯ, ತಾಂತ್ರಿಕ, ಸಮಾಜ ಸೇವೆ, ಡಿಪ್ಲೋಮಾ, ಆಡಳಿತಾತ್ಮಕ ಸೇವೆ, ಚಾರ್ಟರ್ಡ್ ಎಕೌಂಟೆಂಟ್ ಮೊದಲಾದ ಕ್ಷೇತ್ರಗಳಲ್ಲಿ ಪದವಿ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ, 30 ಲಕ್ಷ ರೂ.ನ್ನು ಒಟ್ಟು 451 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.