×
Ad

ಸ್ಮರಣ ಸಂಚಿಕೆಗೆ ಸಾಹಿತ್ಯ ಘಟನಾವಳಿಗಳ ಛಾಯಚಿತ್ರ ಆಹ್ವಾನ

Update: 2019-01-16 21:42 IST

ಮಂಗಳೂರು, ಜ.16: ನಗರದ ಪುರಭವನದಲ್ಲಿ ಜ.29, 30 ಮತ್ತು 31ರಂದು ಜರಗಲಿರುವ ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬಿಡುಗಡೆಗೊಳ್ಳಲಿರುವ ‘ಸ್ಮರಣ ಸಂಚಿಕೆ’ಯಲ್ಲಿ ಪ್ರಕಟಿಸುವುದಕ್ಕೆ ಯೋಗ್ಯವಾದ ಸಾಹಿತ್ಯಕ್ಕೆ ಪೂರಕವಾದ ಘಟನೆಗಳನ್ನೊಳಗೊಂಡ ಸೂಕ್ತ ಛಾಯಾ ಚಿತ್ರಗಳನ್ನು ಆಯ್ಕೆ ಮಾಡಿ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ಛಾಯಾಚಿತ್ರಗಳನ್ನು ಜ.31ರೊಳಗಾಗಿ ‘ಸ್ಮರಣ ಸಂಚಿಕೆ ಛಾಯಾಚಿತ್ರ ವಿಭಾಗ ವಿಭಾಗ’ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ ಶ್ರೀಕೃಷ್ಣ ಸಂಕೀರ್ಣ ಕೊಡಿಯಾಲ್‌ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News