ಧಾರ್ಮಿಕ ಉಪನ್ಯಾಸವು ವೇದಿಕೆಗೆ ಸೀಮಿತಬಾರದು: ಬೇಕಲ ಉಸ್ತಾದ್

Update: 2019-01-16 16:14 GMT

ಮಂಗಳೂರು, ಜ.16: ಧಾರ್ಮಿಕ ಉಪನ್ಯಾಸವು ಕೇವಲ ವೇದಿಕೆಗೆ ಸೀಮಿತವಾಗಬಾರದು. ಧಾರ್ಮಿಕ ಪಂಡಿತರ ಉಪನ್ಯಾಸವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಪ್ರಯೋಜನವಾಗಬಹುದು ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಹೇಳಿದರು.

ಮಂಜನಾಡಿ ಉರೂಸ್ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. 
ಜನರು ಭೋದನೆಯಿಂದ ಕಲಿಯುವುದಕ್ಕಿಂತ ಅಧಿಕವಾಗಿ ನೋಡಿ ಕಲಿಯುತ್ತಾರೆ. ಆದರೆ ಉತ್ತಮ ಯಾವುದು ಎನ್ನುವುದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಪ್ರವಾದಿಯ ಕಾಲದಲ್ಲಿ ಅವರ ಉಪದೇಶವನ್ನು ಸೂಫಿ ಸಂತರು ಚಾಚು ತಪ್ಪದೆ ಪಾಲಿಸುತ್ತಿದ್ದರು. ಪ್ರಸಕ್ತ ಧಾರ್ಮಿಕ ಪಂಡಿತರ ಉಪದೇಶವನ್ನು ನಾವು ಕೂಡಾ ಪಾಲಿಸಬೇಕಾಗಿದೆ ಎಂದರು.

ಮಂಜನಾಡಿ ಜಮಾಅತ್ ಮಾಜಿ ಅಧ್ಯಕ್ಷ ಆಲಿಕುಂಞ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಬೇಕಲ ಉಸ್ತಾದ್ ಅವರನ್ನು ಸನ್ಮಾನಿಸಲಾಯಿತು. ಮುಂಜನಾಡಿ ಮುದರ್ರಿಸ್ ಅಹ್ಮದ್ ಬಾಖ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಮೈಸೂರು ಬಾವ, ಕಾರ್ಯದರ್ಶಿ ಅಝೀಝ್ ಪರ್ತಿಪಾಡಿ, ಕುಂಞಿಬಾವ, ರಝ್ವಿ ಕಲ್ಕಟ್ಟ, ಕರೀಂ ಫೈಝಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News