ಐಫೋನ್ ಗಾಗಿ ಕಿಡ್ನಿ ಮಾರಿದ ವ್ಯಕ್ತಿಗೆ ಈಗ ಕಿಡ್ನಿ ವೈಫಲ್ಯ
ಬೀಜಿಂಗ್, ಜ. 16: 2011ರಲ್ಲಿ ಹದಿಹರೆಯದಲ್ಲಿ ಆ್ಯಪಲ್ ಐಪ್ಯಾಡ್ ಮತ್ತು ಐಫೋನ್ ಖರೀದಿಸುವುದಕ್ಕಾಗಿ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಿದ್ದ ವ್ಯಕ್ತಿ ಈಗ ಮೂತ್ರಪಿಂಡ ವೈಫಲ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ.
ವಾಂಗ್ ಶಾಂಗ್‌ಕುನ್ 17 ವರ್ಷದವರಾಗಿದ್ದಾಗ ಆ್ಯಪಲ್ ಉತ್ಪನ್ನಗಳನ್ನು ಖರೀದಿಸುವುದಕ್ಕಾಗಿ ತನ್ನ ಬಲ ಮೂತ್ರಪಿಂಡವನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಕಿಡ್ನಿಯನ್ನು ತೆಗೆಯುವ ಶಸ್ತ್ರಕ್ರಿಯೆ ನಡೆದ ಸ್ವಲ್ಪ ದಿನಗಳ ಬಳಿಕ ಅವರ ಮೂತ್ರಪಿಂಡ ಕಾರ್ಯನಿರ್ವಹಣೆಯ ಮಟ್ಟ ಕುಸಿಯುತ್ತಾ ಬಂತು ಎಂದು ವೆಬ್‌ಸೈಟೊಂದು ವರದಿ ಮಾಡಿದೆ.
‘‘ಕಿಡ್ನಿ ಮಾರಾಟದಿಂದ ಅವರಿಗೆ 4,500 ಆಸ್ಟ್ರೇಲಿಯ ಡಾಲರ್ ಸಿಕ್ಕಿತ್ತು. ಆ ಹಣದಿಂದ ಅವರು ಐಫೋನ್ 4 ಮತ್ತು ಐಪ್ಯಾಡ್ 2 ಖರೀದಿಸಿದರು’’.
ಈಗ ಅವರು ತನ್ನ ಎರಡನೇ ಕಿಡ್ನಿಯಲ್ಲಿ ಮೂತ್ರನಾಳ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಶಸ್ತ್ರಕ್ರಿಯೆ ನಡೆದ ಸ್ಥಳದಲ್ಲಿ ಶುಚಿತ್ವ ಇಲ್ಲದ ಕಾರಣ ಈ ಪರಿಸ್ಥಿತಿ ಉಂಟಾಗಿದೆ ಎಂದು ವೆಬ್‌ಸೈಟ್ ಹೇಳಿದೆ.