×
Ad

200 ಅಗ್ರ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ 25 ಸಂಸ್ಥೆಗಳು

Update: 2019-01-16 22:18 IST

ಲಂಡನ್, ಜ. 16: 43 ಅಭಿವೃದ್ಧಿಶೀಲ ದೇಶಗಳಲ್ಲಿರುವ 200 ಅಗ್ರ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ 25 ಸಂಸ್ಥೆಗಳಿವೆ.

‘ಟೈಮ್ಸ್ ಹಯರ್ ಎಜುಕೇಶನ್’ (ಟಿಎಚ್‌ಇ) ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ಕಳೆದ ವರ್ಷಕ್ಕಿಂತ 7 ಹೆಚ್ಚು ಭಾರತೀಯ ಸಂಸ್ಥೆಗಳು ಸೇರ್ಪಡೆಯಾಗಿವೆ.

‘ಟೈಮ್ಸ್ ಹಯರ್ ಎಜುಕೇಶನ್ ಎಮರ್ಜಿಂಗ್ ಯುನಿವರ್ಸಿಟಿ ರ್ಯಾಂಕಿಂಗ್ಸ್’ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಭಾರತದ ಮಟ್ಟಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಅಂದರೆ, ಒಟ್ಟಾರೆ ಪಟ್ಟಿಯಲ್ಲಿ ಅದು 14ನೇ ಸ್ಥಾನದಲ್ಲಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (27ನೇ ಸ್ಥಾನ) ನಂತರದ ಸ್ಥಾನದಲ್ಲಿದೆ.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕೀ 21 ಸ್ಥಾನಗಳನ್ನು ಮೇಲೇರಿ 35ನೇ ಸ್ಥಾನವನ್ನು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News