ರಾಜಸ್ತಾನದಲ್ಲಿ ಹಂದಿ ಜ್ವರದಿಂದ 36 ಮಂದಿ ಸಾವು

Update: 2019-01-16 17:02 GMT

ಜೈಪುರ, ಜ.16: ರಾಜಸ್ತಾನದಲ್ಲಿ ಮಂಗಳವಾರ ಮತ್ತೋರ್ವ ವ್ಯಕ್ತಿ ಹಂದಿಜ್ವರದಿಂದ  ಮೃತಪಟ್ಟಿದ್ದು ಕಳೆದ 15 ದಿನಗಳಲ್ಲಿ ಹಂದಿ ಜ್ವರದಿಂದ ಮೃತಪಟ್ಟವರ ಸಂಖ್ಯೆ 36ಕ್ಕೇರಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಘು ಶರ್ಮ ತಿಳಿಸಿದ್ದಾರೆ.

ಹಂದಿ ಜ್ವರದ ಔಷಧಿಯನ್ನು ರಾಜ್ಯದಾದ್ಯಂತ ಲಭ್ಯವಾಗಿಸಲು ಕ್ರಮ ಕೈಗೊಳ್ಳಲಾಗಿದ್ದು ವೈದ್ಯರ ಹಾಗೂ ಸಹಾಯಕ ಸಿಬ್ಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದ್ದು ಹಂದಿ ಜ್ವರ ಕಾಣಿಸಿಕೊಂಡ ಪ್ರದೇಶದಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ 51 ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ ಹಂದಿ ಜ್ವರದ ಲಕ್ಷಣ ವರದಿಯಾಗಿದೆ . ಜೈಪುರದಲ್ಲಿ 17, ಜೋಧ್‌ಪುರದಲ್ಲಿ 13 ಸೇರಿದಂತೆ ಈ ವರ್ಷ ಒಟ್ಟಾರೆ 905 ಸ್ಯಾಂಪಲ್ ಪರೀಕ್ಷೆಯಲ್ಲಿ ಜ್ವರದ ಲಕ್ಷಣ ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News