ಬಿಷಪ್ ಅತ್ಯಾಚಾರ ಪ್ರಕರಣ: ನಾಲ್ವರು ಕ್ರೈಸ್ತ ಸನ್ಯಾಸಿನಿಯರ ವರ್ಗಾವಣೆ

Update: 2019-01-16 17:12 GMT

ತಿರುವನಂತಪುರ, ಜ. 16: ಅತ್ಯಾಚಾರ ಆರೋಪಿ ಜಲಂಧರ್ ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕುರುವಿಲಂಗಾಡ್ ಮಿಷನರಿಶ್ ಆಫ್ ಜೀಸಸ್ ಕಾನ್ವೆಂಟ್‌ನ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ಕೇರಳ ಕೆಥೋಲಿಕ್ ಚರ್ಚ್ ಬುಧವಾರ ವರ್ಗಾವಣೆ ಮಾಡಿದೆ.

ಅತ್ಯಾಚಾರಿ ಆರೋಪಿ ಬಿಷಪ್‌ರನ್ನು ಬಂಧಿಸುವಂತೆ ಆಗ್ರಹಿಸಿ ಕಳೆದ ವರ್ಷ ಕೊಚ್ಚಿಯಲ್ಲಿರುವ ಕೇರಳ ಹೈಕೋರ್ಟ್‌ನ ಸಮೀಪ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ ಸಿಸ್ಟರ್ ಆಲ್ಫಿ ಪಲ್ಲಶ್ಶೇರಿ, ಸಿಸ್ಟರ್ ಅನುಪಮಾ ಕಲಮಂಗಲತುವೆಲಿಯಿಲ್, ಸಿಸ್ಟರ್ ಜೋಸೆಫಿನ್ ವಿಲ್ಲೂನಿಕಲ್ ಹಾಗೂ ಸಿಸ್ಟರ್ ಆ್ಯನ್ಸಿಟ್ಟಾ ಉರುಂಬಿಲ್‌ಗೆ ವರ್ಗಾವಣೆ ಆದೇಶ ನೀಡಲಾಗಿದೆ. ಮುಳಕ್ಕಲ್ ವಿರುದ್ಧ ಚಾನೆಲ್ ಚರ್ಚೆಯಲ್ಲಿ ಪಾಲ್ಗೊಂಡ, ಕ್ರಿಶ್ಚಿಯನೇತರ ದಿನಪತ್ರಿಕೆಯಲ್ಲಿ ಲೇಖನ ಬರೆದು ಮುಳಕ್ಕಲ್ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಸಿಸ್ಟರ್ ಲೂಸಿ ಕಲಪುರಾ ಅವರಿಗೆ ಚರ್ಚ್ ಎಚ್ಚರಿಕೆ ಸಂದೇಶ ರವಾನಿಸಿದ ಕೆಲವು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಅನುಪಮಾ ಅವರನ್ನು ಪಂಜಾಬ್‌ಗೆ, ಆ್ಯನ್ಸಿಟಾ ಅವರನ್ನು ಕಣ್ಣೂರಿಗೆ, ಆಲ್ಫಿ ಅವರನ್ನು ಬಿಹಾರ್‌ಗೆ ಹಾಗೂ ಜೋಸೆಫಿನೆ ಅವರನ್ನು ಜಾರ್ಖಂಡ್‌ಗೆ ವರ್ಗಾಯಿಸಿ ಆದೇಶ ನೀಡಲಾಗಿದೆ. ಈ ನಾಲ್ಕು ಮಂದಿ ಕ್ರೈಸ್ತ ಸನ್ಯಾಸಿನಿಯರು ಹಾಗೂ ಇನ್ನೊಬ್ಬರು ಕೈಸ್ತ ಸನ್ಯಾಸಿನಿ ಅತ್ಯಾಚಾರ ಸಂತ್ರಸ್ತೆ ನ್ಯಾಯ ದೊರಕಿಸಿ ಕೊಡಲು ಕಳೆದ ಒಂದು ವರ್ಷದಿಂದ ಇಲ್ಲಿದ್ದುಕೊಂಡು ಹೋರಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News