×
Ad

ಮಂಗಳೂರು: ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ

Update: 2019-01-16 23:30 IST

ಮಂಗಳೂರು, ಜ.16: ಮಂಗಳೂರು- ಉಳ್ಳಾಲ ಹೆದ್ದಾರಿಯಲ್ಲಿರುವ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಬುಧವಾರ ಸಂಜೆ ನಡೆದಿದೆ.

ಸುಮಾರು 22 ರ ಹರೆಯದ ಯುವತಿ ಎಂದು ತಿಳಿದುಬಂದಿದೆ.

ನೇತ್ರಾವತಿ ಸೇತುವೆ ಮೇಲೆ ಯುವತಿ ಮೊಬೈಲ್ ನಲ್ಲಿ ಮಾತಾಡುತ್ತಾ ಕಣ್ಣೀರು ಸುರಿಸುತ್ತಾ ಹೋಗುತ್ತಿದ್ದು, ಈ ವೇಳೆ ಕಣ್ಣೀರು ಹಾಕುತ್ತಲೇ ನದಿಗೆ ಹಾರಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯುವತಿಯು ಬ್ಯಾಗ್, ಯೂನಿಫಾರಂ ತೊಟ್ಟಿದ್ದು, ಕಾಲೇಜು ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಘಟನೆಗೆ ಸ್ಪಷ್ಟ ಕಾರಣವೇನೆಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸರು ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News