×
Ad

ಪತ್ರಕರ್ತನ ಹತ್ಯೆ ಪ್ರಕರಣ: ಗುರ್ಮೀತ್‌ ಸಿಂಗ್‌ಗೆ ಜೀವಾವಧಿ ಶಿಕ್ಷೆ

Update: 2019-01-17 19:07 IST

ಪಂಚಕುಲ, ನ.17: ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಆರೋಪಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಡೇರ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ಗೆ ಜೀವಾವಧಿ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.

ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಿ ಹರ್ಯಾಣದ ಸುನಾರಿಯಾ ಜೈಲಿನಲ್ಲಿರುವ ಸಿಂಗ್ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಸಿಂಗ್‌ನ ಇತರ ಮೂವರು ಸಹಚರರಿಗೆ ಕೂಡ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯ ಪ್ರತಿಯೊಬ್ಬರಿಗೂ ತಲಾ 50,000 ರೂ. ದಂಡ ವಿಧಿಸಿದೆ.

ಸಂಜೆ ಪತ್ರಿಕೆ ಪೂರಾ ಸಾಚ್ ಸಂಪಾದಕನಾಗಿದ್ದ ರಾಮ್ ಚಂದರ್ ಮೇಲೆ ಅವರ ಮನೆ ಸಮೀಪ 2002ರ ಅಕ್ಟೋಬರ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡುಹಾರಿಸಿದ್ದರು. ಗಾಯಗೊಂಡಿದ್ದ ರಾಮ್ 2002ರ ನವೆಂಬರ್‌ನಲ್ಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News