ಕುಂದಾಪುರ ಎಸಿ ಭೂಬಾಲನ್ ವರ್ಗಾವಣೆ
Update: 2019-01-17 19:45 IST
ಉಡುಪಿ, ಜ.17: ಕುಂದಾಪುರ ವಿಭಾಗದ ಹಿರಿಯ ಸಹಾಯಕ ಆಯುಕ್ತ ಭೂಬಾಲನ್ ಐಎಎಸ್ ಅವರನ್ನು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅರುಣಾ ಪ್ರಭಾ ಕುಂದಾಪುರ ವಿಭಾಗದ ಪ್ರಭಾರ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭೂಬಾಲನ್ 2018ರ ಜ.13ರಂದು ಕುಂದಾಪುರ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.