ಬಡಕುಟುಂಬಕ್ಕೆ ಮಸ್ಕತ್ ಬಂಟ್ಸ್ ಸಂಘದಿಂದ ನೆರವು

Update: 2019-01-17 14:19 GMT

ಕಾಪು, ಜ.17: ಕಟಪಾಡಿ ಕೋಟೆ ಗ್ರಾಮದ ದೇವರತೋಟ ಮುರುಕಲು ಮನೆಯಲ್ಲಿ ವಾಸವಿರುವ ನಾಟಿ ವೈದ್ಯೆ ರಾಜೀವಿ ಶೆಟ್ಟಿ ಅವರ ಕುಟುಂಬಕ್ಕೆ ದಾನಿಗಳ ನೆರವಿನೊಂದಿಗೆ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮನೆ ನಿರ್ಮಾಣ ಕಾಮಗಾರಿಗೆ ಮಸ್ಕತ್ ಬಂಟ್ಸ್ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಕಾಪು ದಂಪತಿ 50ಸಾವಿರ ರೂ. ದೇಣಿಗೆಯನ್ನು ಬುಧವಾರ ಹಸ್ತಾಂತರಿಸಿದರು.

ಈ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಮಸ್ಕತ್ ಬಂಟ್ಸ್ ಸಂಘದಿಂದ ಇನ್ನಷ್ಟು ಆರ್ಥಿಕ ನೆರವು ಒದಗಿಸಲಾಗುವುದು ಎಂದು ಶಶಿಧರ್ ಶೆಟ್ಟಿ ಭರವಸೆ ನೀಡಿದರು.

ಬನ್ನಂಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾಲತ ಯ.ಶೆಟ್ಟಿ ಮಾತನಾಡಿ, ಈ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳ ಲಾಗಿದ್ದು, ಸ್ಥಳೀಯ ಕೋಟೆ ಗ್ರಾಪಂ ವತಿಯಿಂದಲೂ ಸರಕಾರದ ವಸತಿ ಯೋಜನೆಯಡಿ 1.25ಲಕ್ಷ ರೂ. ಸಹಾಯಧನ ಮಂಜೂರಾತಿಯ ನಿರೀಕ್ಷೆ ಯಲ್ಲಿದ್ದೇವೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಮನೆ ನಿರ್ಮಾಣದ ಮೇಲುಸ್ತುವಾರಿ ವಹಿಸಿರುವ ಸ್ಥಳೀಯ ವೈದ್ಯ ಡಾ.ಯು. ಕೆ.ಶೆಟ್ಟಿ, ಸಮಾಜ ಸೇವಕಿ ವೈಶಾಲಿ ಶೆಟ್ಟಿ ಉಡುಪಿ, ಮೂಡಬೆಟ್ಟುಗುತ್ತು ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News