×
Ad

ಮೇಘದೂತ ಪ್ರಶಸ್ತಿ ಪುರಸ್ಕೃತ ಸುಧಾಕರ ದೇವಾಡಿಗರಿಗೆ ಅಭಿನಂದನೆ

Update: 2019-01-17 19:52 IST

ಉಡುಪಿ, ಜ.17: ಉಡುಪಿ ಅಂಚೆ ಮನೋರಂಜನಾ ಕೂಟದ ವತಿಯಿಂದ ಮೇಘ ದೂತ ಪ್ರಶಸ್ತಿ ಪುರಸ್ಕೃತ ಮಣಿಪಾಲ ಅಂಚೆ ವ್ಯವಹಾರ ಕೇಂದ್ರದ ಅಧೀಕ್ಷಕ ಸುಧಾಕರ ದೇವಾಡಿಗ ಅವರಿಗೆ ಅಭಿನಂದನಾ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ ಭಟ್ ಮಾತನಾಡಿ, ಅಂಚೆ ಇಲಾಖೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿರುವ ಮೇಘ ದೂತ ಪ್ರಶಸ್ತಿಯು ಸಹೋದ್ಯೋಗಿ ಸುಧಾಕರ ದೇವಾಡಿಗರನ್ನು ಅರಸಿ ಬಂದಿದ್ದು ಅವರು ಇಲಾಖೆಗೆ ಸಲ್ಲಿಸಿದ ಅಹರ್ನಿಶಿ ಸೇವೆಗೆ ಸಂದ ಗೌರವ ಇದಾಗಿದೆ ಎಂದರು.

ದೇವಾಡಿಗ ದಂಪತಿಯನ್ನು ನಿವೃತ್ತ ಅಂಚೆ ಅಧೀಕ್ಷಕ ಸದಾಶಿವ ನಾಯ್ಕೋ ಸನ್ಮಾನಿಸಿದರು. ಉಪಅಂಚೆ ನಿರೀಕ್ಷಕ ವಸಂತ್ ಸುರೇಖಾ ಸುಧಾಕರ್, ಶಕುಂತಲಾ ಉಪಸ್ಥಿತರಿದ್ದರು.

ಶಾರದಾ ಉಪಾಧ್ಯಾಯ, ಸವಿತಾ ಶೆಟ್ಟಿಗಾರ್, ಭಾರತಿ ನಾಯಕ್ ಶುಭ ಹಾರೈಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಸೂರ್ಯ ನಾರಾಯಣ ರಾವ್ ಸ್ವಾಗತಿಸಿದರು. ಉಪ ಅಂಚೆ ಅಧೀಕ್ಷಕ ಶ್ರೆನಾಥ್ ಎನ್.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿ ನರಸಿಂಹ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News