ಇಸ್ಲಾಮಿಕ್ ಎಜುಕೇಶನ್‌ನ ವಾರ್ಷಿಕ ಪರೀಕ್ಷೆ
ಉಡುಪಿ, ಜ.17: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ 2018-19ನೆ ಸಾಲಿನ ವಾರ್ಷಿಕ ಪರೀಕ್ಷೆಯು ಜ.20 ಮತ್ತು 27ರಂದು ರಾಜ್ಯಾದ್ಯಂತ ಸುಮಾರು 340 ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು ಇದರ ಎರಡು ಕೋರ್ಸ್‌ಗಳಾದ ಇಸ್ಲಾಮಿಕ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೊಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್‌ಗಳಿಗೆ ಪರೀಕ್ಷೆ ಬರೆಯಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಉಡುಪಿಯ ನಾರ್ತ್ ಸ್ಕೂಲ್, ಕುಂದಾಪುರ ಅಂಜು ಮಾನ್ ಶಾಲೆ, ಮಲ್ಪೆಯ ಪ್ಲವರ್ ಆಫ್ ಪ್ಯಾರಡೈಸ್ ಶಾಲೆ, ಕಾಪುವಿನ ಸಿಟಿ ಸೆಂಟರ್ ಜಮ್ಯಿಯತುಲ್ ಫಲಾಹ್ ಕಛೇರಿ, ಕಾರ್ಕಳದ ಅಸ್ಸಹಾಬಾ ಕೇಂದ್ರ (ಗ್ಯಾಲಕ್ಸಿ ಹಾಲ್ ಬಳಿ), ಹೂಡೆಯ ಸಾಲಿಹಾತ್ ಕ್ಯಾಂಪಸ್, ಆದಿಉಡುಪಿ ಮದ್ರಸಾ ನೂರುಲ್ ಹುದಾ, ಕುಕ್ಕಿಕಟ್ಟೆ ಇಂದಿರಾ ನಗರದ ಚರ್ಚ್ ಶಾಲೆ, ಕಂಡ್ಲೂರಿನ ಸರಕಾರಿ ಉರ್ದು ಶಾಲೆ ಹಾಗೂ ಗಂಗೊಳ್ಳಿ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ಗಂಟೆರವರೆಗೆ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಉಡುಪಿ ಕೇಂದ್ರದ ಸಂಚಾಲಕ ನಿಸಾರ್(ಮೊ-9743580081) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.