9/11ರ ದಾಳಿಯಲ್ಲಿ ಬದುಕುಳಿದಿದ್ದ ಉದ್ಯಮಿ ನೈರೋಬಿ ದಾಳಿಯಲ್ಲಿ ಹತ

Update: 2019-01-17 14:40 GMT

ನ್ಯೂಯಾರ್ಕ್, ಜ. 17: 9/11ರ ದಾಳಿಯಲ್ಲಿ ಬದುಕುಳಿದಿದ್ದ ಅಮೆರಿಕದ ಉದ್ಯಮಿ ಜಾಸನ್ ಸ್ಪಿಂಡ್ಲರ್, ನೈರೋಬಿಯ ವಿಲಾಸಿ ಹೊಟೇಲೊಂದರ ಮೇಲೆ ಮಂಗಳವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕೆನ್ಯ ರಾಜಧಾನಿ ನೈರೋಬಿಯ ಹೊಟೇಲ್ ಸಂಕೀರ್ಣವೊಂದರ ಮೇಲೆ ಅಲ್-ಖಾಯಿದ ಜೊತೆ ನಂಟು ಹೊಂದಿರುವ ಅಲ್-ಶಬಾಬ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 21 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

2001 ಸೆಪ್ಟಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳ ಮೇಲೆ ಅಲ್-ಖಾಯಿದ ಭಯೋತ್ಪಾದಕರು ದಾಳಿ ನಡೆಸಿದಾಗ, ಸ್ಪಿಂಡ್ಲರ್ ಆ ಕಟ್ಟಡದಲ್ಲಿರುವ ಹೂಡಿಕೆ ಬ್ಯಾಂಕ್ ‘ಸಾಲೊಮನ್ ಸ್ಮಿತ್ ಬಾರ್ನಿ’ಯಲ್ಲಿ ಕೆಲಸ ಮಾಡುತ್ತಿದ್ದರು.

ಅವರು ಕೆಲಸ ಮಾಡುತ್ತಿದ್ದ ಕಟ್ಟಡದ ಭಾಗವು ಕುಸಿದರೂ, ಅದರಲ್ಲಿ ಯಾರಿಗೂ ಪ್ರಾಣಾಪಾಯ ಆಗಿರಲಿಲ್ಲ.

9/11 ದಾಳಿಯಲ್ಲಿ ಸುಮಾರು 3,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News