ಶ್ವೇತಭವನದ ಮೇಲೆ ದಾಳಿ ನಡೆಸಲು ಸಂಚು: ಓರ್ವ ಸೆರೆ

Update: 2019-01-17 15:15 GMT

ಅಟ್ಲಾಂಟ, ಜ. 17: ಶ್ವೇತಭವನದ ಮೇಲೆ ಟ್ಯಾಂಕ್ ನಿಗ್ರಹ ರಾಕೆಟ್ ಮೂಲಕ ದಾಳಿ ನಡೆಸಲು ಸಂಚು ಹೂಡಿರುವ ಆರೋಪದಲ್ಲಿ ಜಾರ್ಜಿಯದ ವ್ಯಕ್ತಿಯೊಬ್ಬನನ್ನು ಪೊಲೀಸರು ಬುಧವಾರ ‘ಕುಟುಕು’ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಕಮಿಂಗ್ ನಿವಾಸಿ 21 ವರ್ಷದ ಹಾಶಿರ್ ಹಲಾಲ್ ತಾಹಿಬ್, ಬಂದೂಕುಗಳು ಮತ್ತು ಸ್ಫೋಟಕಗಳ ಖರೀದಿಗಾಗಿ ತನ್ನ ಕಾರನ್ನು ಮಾರಾಟ ಮಾಡಿದಾಗ ಭದ್ರತಾ ಸಿಬ್ಬಂದಿ ಬಂಧಿಸಿದರು ಎಂದು ಅಮೆರಿಕದ ಅಟಾರ್ನಿ ಬ್ಯೂಂಗ್ ಜೆ ‘ಬಜಯ್’ ಪಾಕ್ ತಿಳಿಸಿದರು.

ಅಮೆರಿಕದ ಮಾಲೀಕತ್ವದ ಕಟ್ಟಡವೊಂದನ್ನು ಸ್ಫೋಟಕಗಳ ಮೂಲಕ ನಾಶಗೊಳಿಸಲು ಪ್ರಯತ್ನಿಸಿದ ಆರೋಪವನ್ನು ಅವನ ವಿರುದ್ಧ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News