ಮಂಗಳೂರು: ಅಲೋಶಿಯಸ್ ಕಾಲೇಜಿನ 1981ನೆ ಸಾಲಿನ ವಿದ್ಯಾರ್ಥಿಗಳ ಸಮಾಗಮ
Update: 2019-01-17 20:21 IST
ಮಂಗಳೂರು, ಜ.17: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ 38 ವರ್ಷಗಳ ನಂತರ 1981ನೆ ಸಾಲಿನ ಬಿ.ಕಾಂ.ವಿದ್ಯಾರ್ಥಿಗಳು ತಾವು ಕಲಿತ ಕೊಠಡಿ ಮತ್ತು ತಾವು ಕುಳಿತುಕೊಳ್ಳುತ್ತಿದ್ದ ಬೆಂಚ್‌ನಲ್ಲೇ ಕುಳಿತು ಕಾಲೇಜಿನ ದಿವಸಗಳನ್ನು ನೆನಪುಮಾಡಿಕೊಂಡ ಕ್ಷಣಕ್ಕೆ ರವಿವಾರ ಸಾಕ್ಷಿಯಾಯಿತು.
ಉದ್ದಿಮೆದಾರರು,ಲೆಕ್ಕ ಪರಿಶೋಧಕರು, ಕಂಪನಿ ಕಾರ್ಯನಿರ್ವಾಹಕರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆ ವಿದ್ಯಾರ್ಥಿಗಳು ಕೆನಡಾ, ಮಧ್ಯಪ್ರಾಚ್ಯ, ಆಫ್ರಿಕಾ ಮುಂತಾದ ದೇಶಗಳಿಂದ ಆಗಮಿಸಿ ತಮಗೆ ಕಲಿಸಿದ ಉಪನ್ಯಾಸಕರು ಹಾಗೂ ಸಹಪಾಠಿಗಳ ಜೊತೆ ಸಂಭ್ರಮಿಸಿದರು. ಅಲ್ಲದೆ 2021ರಲ್ಲಿ ಮತ್ತೊಮ್ಮೆ ಹೀಗೆ ಸೇರುವುದಾಗಿ ಪ್ರಕಟಿಸಿದರು.
ಡಾ.ಎ.ಎಂ.ನರಹರಿ ಹಾಗೂ ಕಾಲೇಜಿನ ರೆಕ್ಟರ್ ಫಾ.ಡೈನೀಶಿಯಸ್ ವಾಸ್ ಉಪಸ್ಥಿತರಿದ್ದರು. ಸಿಎ ರುಡೊಲ್ಫ್ ರೊಡ್ರೀಗಸ್ ಕಾರ್ಯಕ್ರಮ ನಿರೂಪಿಸಿದರು.